ಮದುವೆಗಿಂತ ಮೊದಲು ಹೀಗಿರಲಿಲ್ಲ. ಈಗ ತುಂಬಾ ದಪ್ಪವಾಗ್ಬಿಟ್ಟಿದ್ದೇನೆ. ಇದು ಮದುವೆಯಾದ ಎಲ್ಲ ಮಹಿಳೆಯರು ಸಾಮಾನ್ಯವಾಗಿ ಹೇಳುವ ಮಾತು. ಮದುವೆಗಿಂತ ಮೊದಲು ತೆಳ್ಳಗಿರುವ ಹುಡುಗಿಯರು ಮದುವೆಯಾದ್ಮೇಲೆ ದಪ್ಪಗಾಗಿಬಿಡ್ತಾರೆ. ಇದಕ್ಕೆ ಕಾರಣವೇನು ಎಂಬುದು ಅನೇಕರಿಗೆ ತಿಳಿದಿಲ್ಲ.
ಡಯಟ್ ನಲ್ಲಿ ಬದಲಾವಣೆ ಮೊದಲ ಕಾರಣ ಎಂದ್ರೆ ತಪ್ಪಾಗಲಾರದು. ಸಾಮಾನ್ಯವಾಗಿ ಮದುವೆ ಸಂಪ್ರದಾಯಗಳು ಶುರುವಾದಾಗಿನಿಂದ ಆಹಾರದಲ್ಲಿ ಹಾಗೂ ಆಹಾರ ಸೇವನೆಯ ಸಮಯದಲ್ಲಿ ಬದಲಾವಣೆಯಾಗುತ್ತದೆ. ಮದುವೆಯಾಗಿ ಒಂದು ತಿಂಗಳವರೆಗೂ ಇದೇ ಮುಂದುವರೆದಿರುತ್ತದೆ. ನಂತ್ರ ಹನಿಮೂನ್ ಮೂಡಿನಲ್ಲಿರುವ ದಂಪತಿ ಮೋಜು, ಮಸ್ತಿ ಹೆಸರಲ್ಲಿ ಹೊಟೇಲ್ ತಿಂಡಿಗಳನ್ನು ಸ್ವಲ್ಪ ಜಾಸ್ತಿಯೇ ಸೇವನೆ ಮಾಡ್ತಾರೆ. ಡಯಟ್ ನಲ್ಲಾದ ಈ ಬದಲಾವಣೆಯಿಂದಾಗಿ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಹಾಗೂ ವಿಟಮಿನ್ ಬಿ ಯ ಕೊರತೆ ಎದುರಾಗುತ್ತದೆ. ಶಕ್ತಿ ಕಡಿಮೆಯಾಗುವುದರಿಂದ ಪದೇ ಪದೇ ಆಹಾರ ಸೇವನೆ ಮಾಡಬೇಕೆನ್ನಿಸುತ್ತದೆ. ಇದ್ರಿಂದ ತೂಕ ಜಾಸ್ತಿಯಾಗುತ್ತದೆ.
ನವ ವಿವಾಹಿತರನ್ನು ಸಂಬಂಧಿಕರು ಸ್ನೇಹಿತರು ಮನೆಗೆ ಕರೆಯುವುದು ಮಾಮೂಲಿ. ಸಂಬಂಧಿಕರು, ಸ್ನೇಹಿತರ ಮನೆಗಳಿಗೆ ಹೋಗಿ ಬಗೆ ಬಗೆಯ ಆಹಾರ ಸೇವನೆಯಿಂದಲೂ ತೂಕ ಜಾಸ್ತಿಯಾಗುತ್ತದೆ.
ಹಾರ್ಮೋನ್ ನಲ್ಲಿ ಬದಲಾವಣೆಯಾಗುವುದರಿಂದಲೂ ತೂಕ ಜಾಸ್ತಿಯಾಗುತ್ತದೆ. ಮದುವೆ ನಂತ್ರ ಲೈಂಗಿಕ ಜೀವನ ಆ್ಯಕ್ಟಿವ್ ಆಗುವುದರಿಂದ ಮಾನಸಿಕ ಹಾಗೂ ಹಾರ್ಮೋನ್ ನಲ್ಲಿ ಬದಲಾವಣೆ ಕಂಡು ಬರುತ್ತದೆ.
ಮದುವೆಗಿಂತ ಮೊದಲು ನಮ್ಮದೆ ಅಂತಿಮ ನಿರ್ಧಾರವಾಗಿರುತ್ತದೆ. ಮದುವೆ ನಂತ್ರ ಗಂಡನ ಮಾತುಗಳನ್ನೂ ಕೇಳಬೇಕು. ಆತನಿಗೆ ಇಷ್ಟವಾದ ತಿಂಡಿಗಳನ್ನು ಮಾಡಬೇಕು. ಕೆಲವೊಮ್ಮೆ ಆತ ತನಗೆ ಇಷ್ಟವಾದ ತಿಂಡಿಗಳನ್ನು ಮಾಡಿ ನಿಮಗೆ ನೀಡಿದ್ರೆ ಮತ್ತೆ ಕೆಲವೊಮ್ಮೆ ಹೊಟೇಲ್ ಗಳಿಂದ ತರಿಸಿ ನಿಮಗೆ ಸರ್ಪ್ರೈಸ್ ನೀಡಬಹುದು. ಹೀಗೆ ಅನಿಯಮಿತ ಆಹಾರ ಸೇವನೆ ನಿಮ್ಮ ತೂಕ ಹೆಚ್ಚಿಸಲು ಕಾರಣವಾಗುತ್ತದೆ.
ಮನೆಯ ಜೊತೆಗೆ ಮಕ್ಕಳ ಜವಾಬ್ದಾರಿ ಹೆಗಲ ಮೇಲೇರಿದಾಗ ಮಹಿಳೆ ತೂಕ ಮತ್ತಷ್ಟು ಜಾಸ್ತಿಯಾಗುತ್ತದೆ. ಆಹಾರ ಸೇವನೆಗೆ ಸರಿಯಾದ ಸಮಯವಿಲ್ಲದಿರುವುದು ಹಾಗೂ ಸೂಕ್ತ ಆಹಾರ ಸೇವನೆ ಮಾಡದಿರುವುದು ಇದಕ್ಕೆ ಕಾರಣವಾಗುತ್ತದೆ.
ಮದುವೆಗಿಂತ ಮೊದಲ ಆಹಾರ, ನಿದ್ರೆ, ವ್ಯಾಯಾಮ, ವಾಕಿಂಗ್ ಹೀಗೆ ಎಲ್ಲದಕ್ಕೂ ಸಮಯ ಸಿಗುತ್ತಿತ್ತು. ಆದ್ರೆ ಜವಾಬ್ದಾರಿ, ಮನೆ, ಮಕ್ಕಳಿಂದಾಗಿ ಸರಿಯಾದ ಸಮಯ ಸಿಗುವುದಿಲ್ಲ. ಇದ್ರಿಂದ ವ್ಯಾಯಾಮ ಮಾಡಲು ಸಾಧ್ಯವಾಗದೆ ತೂಕ ಜಾಸ್ತಿಯಾಗುತ್ತದೆ.