
ತಿಲಕವಿಡುವುದು ಹಿಂದೂಗಳ ಒಂದು ಪದ್ಧತಿ. ಹಿಂದಿನ ಕಾಲದಲ್ಲಿ ಕೂಡ ರಾಜ-ಮಹಾರಾಜರು ಯುದ್ಧಕ್ಕೆ ಹೊರಡುವ ಮೊದಲು ರಾಣಿಯರು ಆರತಿ ಬೆಳಗಿ ತಿಲಕವಿಟ್ಟು ವಿಜಯಶಾಲಿಯಾಗಿ ಬನ್ನಿ ಎಂದು ಪ್ರಾರ್ಥಿಸುತ್ತಿದ್ದರು.
ತಿಲಕವಿಡುವ ಮೊದಲು ಅಕ್ಷತೆಯನ್ನು ಬಳಸಲಾಗುತ್ತದೆ. ಯಾಕೆ ಈ ಅಕ್ಷತೆ ಬಳಸ್ತಾರೆ ಎಂಬುದು ನಿಮಗೆ ಗೊತ್ತಾ?
ವಿಜ್ಞಾನಿಗಳ ಪ್ರಕಾರ ಹಣೆಗೆ ತಿಲಕವಿಡುವುದ್ರಿಂದ ಮನಸ್ಸು ಶಾಂತವಾಗಿರುತ್ತದೆಯಂತೆ. ಅಕ್ಕಿ ಶುದ್ಧತೆಯ ಸಂಕೇತ. ಮೊದಲು ವ್ಯಕ್ತಿಯನ್ನು ಶುದ್ಧಗೊಳಿಸುವ ಹಿನ್ನೆಲೆಯಲ್ಲಿ ಮೊದಲು ತಲೆಗೆ ಅಕ್ಷತೆಯನ್ನು ಹಾಕಿ ನಂತ್ರ ತಿಲಕವಿಡಲಾಗುತ್ತದೆ.
ಗ್ರಂಥಗಳ ಪ್ರಕಾರ ಹವನದ ವೇಳೆ ದೇವಾನುದೇವತೆಗಳಿಗೆ ನೀಡುವ ಶುದ್ಧ ಧಾನ್ಯಗಳಲ್ಲಿ ಅಕ್ಕಿ ಕೂಡ ಒಂದು. ಈ ಅಕ್ಕಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.
ಹಣೆಗೆ ಕುಂಕುಮದ ನಂತ್ರ ಅದ್ರ ಮೇಲೆ ಅಕ್ಷತೆಯನ್ನು ಇಡುವ ಪದ್ಧತಿ ಅನೇಕ ಕಡೆಯಿದೆ. ನಕಾರಾತ್ಮಕ ಶಕ್ತಿಯನ್ನು ನಷ್ಟ ಮಾಡಿ ಸಕಾರಾತ್ಮಕ ಶಕ್ತಿ ವೃದ್ಧಿಯಾಗಲಿ ಎನ್ನುವ ಕಾರಣಕ್ಕೆ ಹೀಗೆ ಮಾಡಲಾಗುತ್ತದೆ.