alex Certify ನಿಶ್ಚಿತಾರ್ಥದ ʼಉಂಗುರʼ ಎಡಗೈನ 4ನೇ ಬೆರಳಿಗೇ ತೊಡಿಸುವುದ್ಯಾಕೆ ಗೊತ್ತಾ….? ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಶ್ಚಿತಾರ್ಥದ ʼಉಂಗುರʼ ಎಡಗೈನ 4ನೇ ಬೆರಳಿಗೇ ತೊಡಿಸುವುದ್ಯಾಕೆ ಗೊತ್ತಾ….? ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ

ನಿಶ್ಚಿತಾರ್ಥದ ಉಂಗುರಕ್ಕೆ ವಿಶೇಷ ಮಹತ್ವವಿದೆ. ಸವಿ ನೆನಪುಗಳ ಜೊತೆಗೆ ಸಂಗಾತಿಗೆ ನಿಮ್ಮ ಬದ್ಧತೆಯನ್ನು ಸೂಚಿಸುವ ಸಂಕೇತ ಅದು. ನಿಶ್ಚಿತಾರ್ಥದ ಉಂಗುರವನ್ನು ಎಡಗೈಯ ನಾಲ್ಕನೇ ಬೆರಳಿಗೆ ತೊಡಿಸಲಾಗುತ್ತದೆ. ನಿಶ್ಚಿತಾರ್ಥದ ಉಂಗುರುವನ್ನು ಬೇರೆ ಬೆರಳುಗಳಲ್ಲಿ ಯಾಕೆ ಧರಿಸುವುದಿಲ್ಲ ಎಂಬ ಪ್ರಶ್ನೆ ಮೂಡವುದು ಸಹಜ. ಇದಕ್ಕೆಲ್ಲ ಉತ್ತರ ಚರ್ಚ್ ಆಫ್ ಇಂಗ್ಲೆಂಡ್,  ಕ್ಯಾಥೋಲಿಕ್ ಚರ್ಚ್‌ನೊಂದಿಗೆ ಸಂಬಂಧವನ್ನು ಕಡಿದುಕೊಂಡ ಕಥೆಯಲ್ಲಿದೆ.

ನಾವು ಎಡಗೈಯಲ್ಲಿ ಮದುವೆಯ ಉಂಗುರಗಳನ್ನು ಧರಿಸಬೇಕೆಂಬ ನಿಯಮವನ್ನು ಸಾಮಾನ್ಯ ಪ್ರಾರ್ಥನೆ ಪುಸ್ತಕದಲ್ಲಿ ಸೂಚಿಸಲಾಗಿದೆ. ಬುಕ್ ಆಫ್ ಕಾಮನ್ ಪ್ರೇಯರ್ 1549 ರಿಂದ ಆಂಗ್ಲಿಕನ್ ಚರ್ಚ್ (ಚರ್ಚ್ ಆಫ್ ಇಂಗ್ಲೆಂಡ್‌ನ ಇನ್ನೊಂದು ಹೆಸರು) ಬಳಸುವ ಪ್ರಾರ್ಥನಾ ಪುಸ್ತಕಗಳ ಸಂಗ್ರಹವಾಗಿದೆ. ಕ್ಯಾಥೋಲಿಕ್ ಚರ್ಚ್‌ನೊಂದಿಗೆ ಸಂಬಂಧವನ್ನು ಕಡಿದುಕೊಂಡ ನಂತರ ಆಂಗ್ಲಿಕನ್ ಚರ್ಚ್‌ಗೆ ವಿಭಿನ್ನ ಸೇವೆ ಮತ್ತು ಆರಾಧನಾ ಪುಸ್ತಕಗಳು ಬಂದವು.

ಇವುಗಳಲ್ಲಿ ಒಂದಾದ ʼಬುಕ್ ಆಫ್ ಕಾಮನ್ ಪ್ರೇಯರ್ʼನಲ್ಲಿ ಮಹಿಳೆಯ ಎಡಗೈಯ ನಾಲ್ಕನೇ ಬೆರಳಿಗೆ ಉಂಗುರವನ್ನು ಹಾಕಬೇಕೆಂದು ಆದೇಶಿಸಲಾಗಿದೆ. ಈ ಸಂಪ್ರದಾಯವು ಆಂಗ್ಲಿಕನ್ ಚರ್ಚ್ ಅನ್ನು ಕ್ಯಾಥೋಲಿಕ್ ಚರ್ಚ್‌ನಿಂದ ಪ್ರತ್ಯೇಕಿಸುತ್ತದೆ. ಯುರೋಪಿನ ಕ್ರಿಶ್ಚಿಯನ್ ಧರ್ಮದ ಇತರ ಆವೃತ್ತಿಗಳಿಂದಲೂ ಪ್ರತ್ಯೇಕಿಸುತ್ತದೆ. ಈ ಸುಧಾರಣಾ ಪ್ರಕ್ರಿಯೆಗೂ ಮೊದಲು  ಹೆಚ್ಚಿನ ಯುರೋಪ್ ಮತ್ತು ಕ್ಯಾಥೋಲಿಕ್ ಚರ್ಚ್‌ಗಳಲ್ಲಿ ಬಲಗೈಗೆ ಮದುವೆಯ ಉಂಗುರಗಳನ್ನು ತೊಡಿಸಬೇಕೆಂದು ಸೂಚಿಸಲಾಗಿತ್ತು.

ಬಲಗೈಯಲ್ಲಿ ಮದುವೆಯ ಉಂಗುರವನ್ನು ಧರಿಸುವುದು ಶಕ್ತಿಯ ಸಂಕೇತವಾಗಿತ್ತು. ಎಡಗೈಯ ನಾಲ್ಕನೇ ಬೆರಳಿನಲ್ಲಿ ಮದುವೆ ಉಂಗುರ ಧರಿಸಬೇಕೆಂಬ ನಿಯಮವನ್ನು ತಂದವರು ಅಲೆಕ್ಸಾಂಡ್ರಿಯಾದ ಅಪ್ಪಿಯನ್.‌ ಈತನೊಬ್ಬ ಇತಿಹಾಸಕಾರ ಮತ್ತು 2 ನೇ ಶತಮಾನದಲ್ಲಿ ವಾಸಿಸುತ್ತಿದ್ದರು. ಅಪ್ಪಿಯನ್ ಪ್ರಕಾರ, ಪ್ರಾಚೀನ ಈಜಿಪ್ಟಿನವರು ಬೆರಳಿನಿಂದ ಹೃದಯಕ್ಕೆ ಚಲಿಸುವ ನರವಿದೆ ಎಂದು ನಂಬಿದ್ದರು. ಅಭಿಧಮನಿಯನ್ನೇ ನರ ಎಂದುಕೊಂಡು ಅವರು ಗೊಂದಲಕ್ಕೀಡಾಗಿದ್ದರು. ಅದನ್ನು ಪ್ರೇಮಿಯ ಅಭಿಧಮನಿ ಎಂದು ಕರೆದರು. ಆದರೆ ಈ ಸಿದ್ಧಾಂತ ತಪ್ಪಾಗಿದೆ.

ಎಡಗೈಯ ನಾಲ್ಕನೇ ಬೆರಳಿನಲ್ಲಿ ಮದುವೆಯ ಉಂಗುರವನ್ನು ಧರಿಸುವ ನಿಯಮದ ಬಗ್ಗೆ ಮತ್ತೊಂದು ತಪ್ಪು ಸಿದ್ಧಾಂತವನ್ನು ಲೆವಿನಸ್ ಲೆಮ್ನಿಯಸ್ ಶಾಶ್ವತಗೊಳಿಸಿದರು. ಲೆವಿನಸ್ ಪ್ರಕಾರ ಬೆರಳಿನ ಮೇಲೆ ಚಿನ್ನದ ಉಂಗುರವನ್ನು ಉಜ್ಜುವುದು ಮಹಿಳೆಯ ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಈ ವಾದಕ್ಕೆ ಯಾವುದೇ ಪುರಾವೆಗಳಿಲ್ಲ. ಕ್ರಿಶ್ಚಿಯನ್ ಧರ್ಮವನ್ನು ಹೊರತುಪಡಿಸಿ ಇತರ ಧರ್ಮಗಳಲ್ಲಿ ಎಡಗೈಯ ನಾಲ್ಕನೇ ಬೆರಳಿಗೆ ಮದುವೆಯ ಉಂಗುರವನ್ನು ಧರಿಸುವುದು ಅನಿವಾರ್ಯವಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...