alex Certify ಗರ್ಭದಲ್ಲಿರುವ ಮಗು ಒದೆಯುವುದು ಯಾಕೆ ಗೊತ್ತಾ……? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭದಲ್ಲಿರುವ ಮಗು ಒದೆಯುವುದು ಯಾಕೆ ಗೊತ್ತಾ……?

ಗರ್ಭದಲ್ಲಿರುವ ಮಗು ಮೊದಲ ಬಾರಿ ಒದೆಯುವುದು, ಚಲಿಸುವುದು ಮಾಡಿದಾಗ ತಾಯಿಯಾದವಳಿಗೆ ಸಿಗುವ ಅನುಭವವೇ ಅನನ್ಯವಾದದ್ದು. ಮಗು ತಾನು ಬೆಳೆಯುತ್ತಿರುವುದನ್ನು ಸೂಚಿಸಲು ಈ ಎಲ್ಲಾ ಚಟುವಟಿಕೆಗಳನ್ನು ಮಾಡುತ್ತಿರುತ್ತದೆ.

ಸಾಮಾನ್ಯವಾಗಿ ಈ ಒದೆತಗಳು 20 ವಾರಗಳ ಬಳಿಕ ಆರಂಭಗೊಳ್ಳುತ್ತದೆ. ಮೂರನೇ ತ್ರೈಮಾಸಿಕದಲ್ಲಿ ಈ ಕಿಕ್ ಗಳು ಸ್ವಲ್ಪ ಕಡಿಮೆ ಇರಬಹುದು. ಏಕೆಂದರೆ ಮಗು ಹೊಟ್ಟೆಯ ಒಳಭಾಗದ ತುಂಬಾ ತುಂಬಿಕೊಂಡಿರುತ್ತದೆ.

ಹೀಗಿದ್ದೂ ಮಗುವಿನ ಚಲನೆ ಕಂಡು ಬರುತ್ತಿಲ್ಲ ಎಂಬುದು ತಿಳಿದಾಕ್ಷಣ ನೀವು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಸಾಮಾನ್ಯವಾಗಿ ಮಕ್ಕಳು ಬೆಳಿಗ್ಗೆ ಮತ್ತು ಸಂಜೆ ಹೆಚ್ಚು ಸಕ್ರಿಯವಾಗಿರುತ್ತಾರೆ. ಆ ಸಮಯದಲ್ಲಿ ಚಲನೆಯನ್ನು ಗಮನಿಸಿ.

ಸತತ ಒಂದು ಗಂಟೆ ಹೊತ್ತು ಕಿಕ್ ಕಾಣಿಸದಿದ್ದರೆ ಜ್ಯೂಸ್ ಕುಡಿಯಿರಿ ಇಲ್ಲವೇ ಸಿಹಿ ತಿನ್ನಿ. ಬಲಬದಿಗೆ ಮಲಗಿ. ಆಗಲೂ ಚಲನೆ ಕಾಣಿಸದಿದ್ದರೆ ವೈದ್ಯರನ್ನು ಭೇಟಿ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...