ಅನೇಕ ಬಾರಿ ನಮಗೆ ದಿನನಿತ್ಯ ನಾವು ಬಳಸುವ ಅಥವಾ ನಮ್ಮ ಸುತ್ತಮುತ್ತ ಇರುವ ವಸ್ತುಗಳ ಬಗ್ಗೆ ತಿಳಿದಿರುವುದಿಲ್ಲ. ಅದನ್ನು ಏಕೆ ಬಳಸುತ್ತಾರೆ? ನಿರ್ದಿಷ್ಟ ಸ್ಥಳದಲ್ಲಿಯೇ ಆ ವಸ್ತುವನ್ನು ಏಕೆ ಇಡುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದರ ಬಗ್ಗೆ ನಾವು ಆಸಕ್ತಿ ತೋರುವುದಿಲ್ಲ.
ಎಸಿ ಕೂಡ ಹಾಗೆಯೇ. ಎಸಿಯನ್ನು ಗೋಡೆ ಮೇಲೆ ಅಳವಡಿಸ್ತಾರೆ. ಇದು ಎಲ್ಲರಿಗೂ ತಿಳಿದಿದೆ. ಸೆಕೆಗಾಲದಲ್ಲಿ, ಚಳಿಗಾಲದಲ್ಲಿ ಹೀಗೆ ಎಲ್ಲ ಕಾಲದಲ್ಲೂ ಬಳಕೆಯಾಗುವ ಎಸಿಯನ್ನು ಗೋಡೆಯ ಮೇಲೆಯೇ ಏಕೆ ಅಳವಡಿಸುತ್ತಾರೆಂದು ಗೊತ್ತಾ? ಎಸಿಯನ್ನು ಹೀಗೆ ಅಳವಡಿಸಲು ವೈಜ್ಞಾನಿಕ ಕಾರಣವಿದೆ.
ಎಸಿಯನ್ನು ಗೋಡೆಯ ಮೇಲೆ ಹಾಕುವುದರಿಂದ ಗಾಳಿ ಕೋಣೆಯ ಮೂಲೆ ಮೂಲೆಗೆ ತಲುಪಿ ವಾತಾವರಣವನ್ನು ತಂಪಾಗಿರಿಸುತ್ತದೆ. ಎಸಿ ಬಿಸಿ ಗಾಳಿಯನ್ನು ಎಳೆದುಕೊಂಡು ಕೋಣೆಯ ನೆಲವನ್ನು ಕೂಡ ತಂಪಾಗಿಸುತ್ತದೆ. ಇದಕ್ಕೆ ವಿರುದ್ಧವಾಗಿ ಹೀಟರನ್ನು ನಾವು ನೆಲದ ಮೇಲೆ ಇಡುತ್ತೇವೆ. ಇದರಲ್ಲಿ ಕೋಣೆಯ ನೆಲ ಬಿಸಿಯಾಗಿ ಕೋಣೆಯ ಮೇಲ್ಭಾಗವೂ ಬಿಸಿಯಾಗುತ್ತದೆ. ಈ ಕನ್ವೆಕ್ಷನ್ ಪ್ರೊಸೆಸ್ ನಿಂದ ಕೋಣೆ ಬಹಳ ಹೊತ್ತು ಬಿಸಿಯಾಗಿರುತ್ತದೆ.
ಒಮ್ಮೆ ಎಸಿಯನ್ನು ಕೆಳಗಡೆ ಹಾಕಿದಲ್ಲಿ ಕೋಣೆಯ ಮೇಲ್ಭಾಗದ ಬಿಸಿ ಹಾಗೇ ಇರುತ್ತದೆ. ಹಾಗಾಗಿ ಎಸಿಯನ್ನು ಯಾವಾಗಲೂ ಗೋಡೆಯ ಮೇಲ್ಭಾಗದಲ್ಲಿ ಅಳವಡಿಸುತ್ತಾರೆ. ಹಾಗೆಯೇ ಎಸಿ ಆನ್ ಮಾಡಿದಾಗ ಕೋಣೆಯ ಕಿಟಕಿ, ಬಾಗಿಲುಗಳನ್ನು ಕೂಡ ಮುಚ್ಚಿರುತ್ತಾರೆ.