ಜೀವ ಜಲ ನೀರು. ಪ್ರತಿಯೊಬ್ಬ ಆರೋಗ್ಯ ಮನುಷ್ಯ ಪ್ರತಿದಿನ 3 ಲೀಟರ್ ನೀರು ಕುಡಿಯಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ನೀರು ದೇಹದೊಳಗಿನ ಕಲ್ಮಶಗಳನ್ನು ಹೊರಗೋಡಿಸುವ ಕೆಲಸ ಮಾಡುತ್ತದೆ. ಆರೋಗ್ಯ ವೃದ್ಧಿಗೆ ಅತ್ಯಗತ್ಯವಾಗಿರುವ ನೀರನ್ನು ಹೇಗೆ ಬೇಕೋ ಹಾಗೆ ಕುಡಿಯುವುದು ಸೂಕ್ತವಲ್ಲ. ಅದಕ್ಕೂ ವಿಧಾನವಿದೆ.
ಆತುರದಲ್ಲಿ ಕೆಲವರು ನಿಂತು ನೀರನ್ನು ಕುಡಿದ್ರೆ ಮತ್ತೆ ಕೆಲವರು ಓಡಾಡ್ತಾ ನೀರು ಕುಡಿಯುತ್ತಾರೆ. ಇದು ಆರೋಗ್ಯ ವೃದ್ಧಿಸುವ ಬದಲು ಆರೋಗ್ಯ ಹಾಳಾಗಲು ಕಾರಣವಾಗುತ್ತದೆ. ಎಂದೂ ನಿಂತು ನೀರು ಕುಡಿಯಬಾರದು. ಇದ್ರಿಂದ ಸಮಸ್ಯೆ ಎದುರಾಗುತ್ತದೆ. ನಿಂತು ನೀರು ಕುಡಿದ್ರೆ ಸ್ನಾಯುಗಳ ಮೇಲೆ ಒತ್ತಡ ಬೀಳುತ್ತದೆ. ಸ್ನಾಯುಗಳು ದುರ್ಬಲವಾಗುತ್ತವೆ. ರಾತ್ರಿ ಪಾದಗಳಲ್ಲಿ ಉರಿ ಕಾಣಿಸಿಕೊಂಡು ನಿದ್ರೆ ಸರಿಯಾಗಿ ಬರುವುದಿಲ್ಲ.
ಈ ಅಭ್ಯಾಸ ಜೀರ್ಣಶಕ್ತಿ ಮೇಲೂ ಪ್ರಭಾವ ಬೀರುತ್ತದೆ. ನಿಂತು ನೀರು ಕುಡಿಯುವುದ್ರಿಂದ ಜೀರ್ಣಕ್ರಿಯೆ ಸುಲಭವಾಗುವುದಿಲ್ಲ. ಹೊಟ್ಟೆ ಸಮಸ್ಯೆ ಸದಾ ಕಾಡುತ್ತದೆ.
ಕೀಲುಗಳ ಮೇಲೂ ಇದು ಕೆಟ್ಟ ಪರಿಣಾಮ ಬೀರುತ್ತದೆ. ಕೀಲುಗಳು ದುರ್ಬಲವಾಗಿ ಸಂಧಿವಾತದ ಸಮಸ್ಯೆ ಕಾಡುತ್ತದೆ.
ನಿಂತು ನೀರು ಕುಡಿಯುವುದ್ರಿಂದ ಮುಖ್ಯವಾಗಿ ಕಿಡ್ನಿ ಮೇಲೆ ಪ್ರಭಾವ ಬೀರುತ್ತದೆ. ಕಿಡ್ನಿ ಮೇಲೆ ಒತ್ತಡ ಹೆಚ್ಚಾಗಿ ಕಿಡ್ನಿ ಸಮಸ್ಯೆ ಕಾಡುತ್ತದೆ. ಕಿಡ್ನಿ ಸಮಸ್ಯೆ ಹೃದಯ ಸಮಸ್ಯೆಗೂ ಕಾರಣವಾಗುತ್ತದೆ.