alex Certify ಪುರುಷರಿಗೆ ಸ್ಪರ್ಮ್‌ ಕೌಂಟ್‌ ಮುಖ್ಯ ಯಾಕೆ ಗೊತ್ತಾ…..? ಇಲ್ಲಿದೆ ವೀರ್ಯಾಣು ಸಂಖ್ಯೆ ಹೆಚ್ಚಿಸುವ ಆಹಾರಗಳ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುರುಷರಿಗೆ ಸ್ಪರ್ಮ್‌ ಕೌಂಟ್‌ ಮುಖ್ಯ ಯಾಕೆ ಗೊತ್ತಾ…..? ಇಲ್ಲಿದೆ ವೀರ್ಯಾಣು ಸಂಖ್ಯೆ ಹೆಚ್ಚಿಸುವ ಆಹಾರಗಳ ವಿವರ

ಬದಲಾಗುತ್ತಿರುವ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರಗಳು  ಪುರುಷರ ಫಲವತ್ತತೆ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿವೆ. ಮದುವೆಯ ನಂತರ ಪುರುಷರಲ್ಲಿ ದೌರ್ಬಲ್ಯ ಕಂಡುಬಂದರೆ ತಂದೆಯಾಗಲು ಸಮಸ್ಯೆಗಳು ಎದುರಾಗಬಹುದು. ದೌರ್ಬಲ್ಯ ಎಂದರೆ ಅವರ ವೀರ್ಯದ ಸಂಖ್ಯೆ ಮತ್ತು ವೀರ್ಯದ ಗುಣಮಟ್ಟ ಕಡಿಮೆಯಾಗಿದೆ ಎಂದರ್ಥ.

ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುವ ಕೆಲವೊಂದು ನಿರ್ದಿಷ್ಟ ಆಹಾರಗಳನ್ನು ಪುರುಷರು ಸೇವಿಸಬೇಕು. ಇಲ್ಲದಿದ್ದರೆ ದಾಂಪತ್ಯ ಜೀವನದಲ್ಲಿ ತೊಂದರೆ ಉಂಟಾಗುತ್ತದೆ. ಪುರುಷ ಫಲವತ್ತತೆಯನ್ನು ಸುಧಾರಿಸುವಲ್ಲಿ ಕಿವಿ ಹಣ್ಣು ಬಹಳ ಪ್ರಯೋಜನಕಾರಿ. ವಿವಾಹಿತ ಪುರುಷರು ಪ್ರತಿನಿತ್ಯ ಕಿವಿ ಹಣ್ಣನ್ನು ಸೇವನೆ ಮಾಡಬೇಕು.

ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಸಿ ಇದೆ. ಇದು ವೀರ್ಯದ ಸಂಖ್ಯೆ ಮತ್ತು ಗುಣಮಟ್ಟವನ್ನು ಹೆಚ್ಚಿಸುತ್ತದೆ. ವಿಟಮಿನ್ ಸಿ ಪಡೆಯಲು ನೀವು ಟೊಮ್ಯಾಟೊ ಮತ್ತು ಬ್ರೊಕೊಲಿಯನ್ನು ಸಹ ಸೇವಿಸಬಹುದು.

ಸಾಲ್ಮನ್ ಮೀನು ಕೂಡ ಪುರುಷರ ದೌರ್ಬಲ್ಯವನ್ನು ಕಡಿಮೆ ಮಾಡಬಲ್ಲದು.  ಒಮೆಗಾ-3 ಕೊಬ್ಬಿನಾಮ್ಲಗಳು ಸಾಲ್ಮನ್ ಮೀನುಗಳಲ್ಲಿ ಕಂಡುಬರುತ್ತವೆ. ಇದು ವೀರ್ಯದ ಗುಣಮಟ್ಟ ಮತ್ತು ಪ್ರಮಾಣವನ್ನು ಹೆಚ್ಚಿಸಲು ಸಹಾಯಕವಾಗಿದೆ. ನೀವು ಸಸ್ಯಾಹಾರಿಗಳಾಗಿದ್ದರೆ ಮೀನಿನ ಬದಲು ಅಗಸೆಬೀಜ ಅಥವಾ ಚಿಯಾ ಬೀಜಗಳನ್ನು ಸೇವಿಸಬಹುದು.

ಸಾಮಾನ್ಯವಾಗಿ ಕುಂಬಳಕಾಯಿ ಮೇಲೋಗರ ಮಾಡುವಾಗ ನಾವು ಬೀಜವನ್ನು ಬಿಸಾಡಿ ಬಿಡುತ್ತೇವೆ. ಆದರೆ ಈ ಬೀಜಗಳು ಸತುವಿನ ಸಮೃದ್ಧ ಮೂಲವೆಂದು ಪರಿಗಣಿಸಲಾಗಿದೆ. ಇದು ಪುರುಷ ಫಲವತ್ತತೆಯನ್ನು ಹೆಚ್ಚಿಸಲು ಅತ್ಯುತ್ತಮವಾಗಿದೆ. ಸತುವಿನ ಸಹಾಯದಿಂದ ವೀರ್ಯದ ಎಣಿಕೆ ಮತ್ತು ಗುಣಮಟ್ಟವು ಉತ್ತಮಗೊಳ್ಳುತ್ತದೆ.

ಇದಲ್ಲದೆ ಸೊಪ್ಪುಗಳನ್ನು ಕೂಡ ಸೇವನೆ ಮಾಡಬೇಕು. ಫೋಲಿಕ್ ಆಸಿಡ್‌, ವಿಟಮಿನ್ ಬಿ9 ಸೊಪ್ಪುಗಳಲ್ಲಿ ಕಂಡುಬರುತ್ತದೆ. ಈ ಅಂಶಗಳು ವೀರ್ಯದ ಆರೋಗ್ಯವನ್ನು ಸುಧಾರಿಸುತ್ತವೆ. ಪಾಲಕ್, ಶತಾವರಿ ಮುಂತಾದವುಗಳನ್ನು ಸೇವಿಸಿದರೆ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...