ಪಿಂಗಾಣಿ ನೂರು ರೂಪಾಯಿಯಿಂದ ಲಕ್ಷಾಂತರ ರುಪಾಯಿಯವರೆಗೂ ಬೆಲೆ ಬಾಳುವಂಥದ್ದು. ಪಿಂಗಾಣಿಯಲ್ಲೂ ಅನೇಕ ವೈವಿಧ್ಯತೆ ಇದ್ದು ಚೀನಾ ಹಾಗೂ ಜಪಾನ್ ನಲ್ಲಿ ಇದರ ಬಳಕೆ ಹೆಚ್ಚು.
ನಮ್ಮಲ್ಲಿ ಪಿಂಗಾಣಿ ಪಾತ್ರೆಯನ್ನು ಹೆಚ್ಚಾಗಿ ಚಹಾ ಕಪ್ ಗಳಲ್ಲಿ, ಉಪ್ಪು ಮತ್ತು ಉಪ್ಪಿನಕಾಯಿ ಸಂಗ್ರಹದ ಜಾಡಿಯಾಗಿ, ಹೆಚ್ಚೆಂದರೆ ಪಿಂಗಾಣಿ ತಟ್ಟೆಗಳನ್ನು ಬಳಸುತ್ತೇವೆ. ಪಿಂಗಾಣಿ ಪಾತ್ರೆಗಳ ಮಹತ್ವ ಎಂಥದ್ದು ಗೊತ್ತಾ?
ವಿಶೇಷವಾಗಿ ಉಪ್ಪಿನಕಾಯಿಗೆ ಪಿಂಗಾಣಿ ಜಾಡಿಯನ್ನು ಬಳಸುವುದರಿಂದ ಅನೇಕ ಪ್ರಯೋಜನ ಇದೆ. ಇದರಲ್ಲಿ ಉಪ್ಪಿನಕಾಯಿಯನ್ನು ವರ್ಷಗಟ್ಟಲೆ ಇಟ್ಟರೂ ಯಾವುದೇ ರಾಸಾಯನಿಕ ಬದಲಾವಣೆ ಉಂಟಾಗುವುದಿಲ್ಲ.
ಪಿಂಗಾಣಿ ಗಾಳಿಯಾಡದ ಹಾಗೆ ಅದರಲ್ಲಿರುವ ಪದಾರ್ಥವನ್ನು ಸಂರಕ್ಷಣೆ ಮಾಡುತ್ತದೆ. ಇದು ತೇವಾಂಶವನ್ನು ತಡೆಹಿಡಿಯುವುದರಿಂದ ಉಪ್ಪು ನೀರಾಗುವುದಿಲ್ಲ, ಉಪ್ಪಿನಕಾಯಿಯೂ ಹೆಚ್ಚು ದಿನ ಕೆಡದೇ ಇರುತ್ತದೆ. ಅಷ್ಟೇ ಅಲ್ಲ, ದೀರ್ಘಾವಧಿಯವರೆಗೂ ಉಪ್ಪಿನಕಾಯಿ ತನ್ನ ರುಚಿಯನ್ನು ಕಳೆದುಕೊಳ್ಳುವುದಿಲ್ಲ.