ಸಾಮಾನ್ಯವಾಗಿ ಜನರ ಹೊಟ್ಟೆಗೆ ಆಲ್ಕೋಹಾಲ್ ಹೋಗ್ತಿದ್ದಂತೆ ಅವರ ಮಾತಿನ ಶೈಲಿ ಬದಲಾಗುತ್ತದೆ. ನಾರ್ಮಲ್ ಆಗಿರುವ ವೇಳೆ ಇಂಗ್ಲೀಷ್ ಮಾತನಾಡಲು ಹೆದರುವ ಜನರು ಆಲ್ಕೋಹಾಲ್ ಸೇವನೆ ಮಾಡ್ತಿದ್ದಂತೆ ಫಟಾಫಟ್ ಇಂಗ್ಲೀಷ್ ಮಾತನಾಡ್ತಾರೆ. ಎಲ್ಲರಿಗೂ ಇಂಗ್ಲೀಷ್ ನಲ್ಲಿಯೇ ಉತ್ತರ ನೀಡಲು ಬಯಸ್ತಾರೆ. ಇದಕ್ಕೆ ವೈಜ್ಞಾನಿಕ ಕಾರಣವಿದೆ. ಸಂಶೋಧನೆಯೊಂದರಲ್ಲಿ ಇದಕ್ಕೆ ಕಾರಣವೇನು ಎಂಬುದನ್ನು ಹೇಳಲಾಗಿದೆ.
ಜರ್ನಲ್ ಆಫ್ ಸೈಕೋಫಾರ್ಮಾಕಾಲಜಿಯಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಕೆಲವರು 1-2 ಪೆಗ್ ಆಲ್ಕೋಹಾಲ್ ಸೇವಿಸಿದ ನಂತರ ಆತಂಕದಿಂದ ಹೊರಗೆ ಬರ್ತಾರೆ. ಅವರಲ್ಲಿ ವಿಶ್ವಾಸ ಹೆಚ್ಚಾಗುತ್ತದೆ. ಇತರ ಭಾಷೆಯಲ್ಲಿ ಮಾತನಾಡಲು ಪ್ರಾರಂಭಿಸುತ್ತಾರೆ. ಭಾರತದ ಬಗ್ಗೆ ಹೇಳುವುದಾದ್ರೆ ಮದ್ಯ ಸೇವಿಸಿದ ನಂತರ, ಅನೇಕ ಜನರು ಇಂಗ್ಲಿಷ್ ನಲ್ಲಿ ಮಾತನಾಡಲು ಪ್ರಾರಂಭಿಸುತ್ತಾರೆ.
ಈ ಸಂಶೋಧನೆಯ ಪ್ರಕಾರ, ಮದ್ಯಪಾನ ಜನರ ಸ್ಮರಣೆ ಮತ್ತು ಏಕಾಗ್ರತೆಯ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಜನರ ವ್ಯಕ್ತಿತ್ವ ಸಂಪೂರ್ಣವಾಗಿ ಬದಲಾಗುತ್ತದೆ. ಅವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕೆಲವರು ಬೇರೆ ಭಾಷೆಯಲ್ಲಿ ಮಾತನಾಡಿದ್ರೆ ಕೆಲವರು ನೃತ್ಯ ಮಾಡಲು, ಹಾಡಲು ಶುರು ಮಾಡ್ತಾರೆ.