ಜಗತ್ತು ಎಷ್ಟೇ ಮುಂದುವರೆದಿದ್ದರೂ ಕೆಲವೊಂದು ಪದ್ಧತಿ, ಸಂಪ್ರದಾಯಗಳು ಈಗಲೂ ಆಚರಣೆಯಲ್ಲಿವೆ. ಹಿರಿಯರು ಹೇಳಿದ ಕೆಲ ನೀತಿ ಪಾಠಗಳನ್ನು ಈಗಲೂ ಅನುಸರಿಸಿ, ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಲಾಗ್ತಾ ಇದೆ. ಅದ್ರಲ್ಲಿ ಚಾಣಕ್ಯನ ನೀತಿ ಪಾಠ ಕೂಡ ಒಂದು. ಚಾಣಕ್ಯ ಹೇಳಿದ ಕೆಲವು ವಿಷಯಗಳನ್ನು ಜನರು ಈಗಲೂ ಅನುಸರಿಸುತ್ತಿದ್ದಾರೆ. ಜೀವನದಲ್ಲಿ ಎಂದೂ ಸೋಲು ಕಾಣಬಾರದೆಂದರೆ ಈ ನಾಲ್ಕು ನೀತಿಯನ್ನು ಅನುಸರಿಸಿ ಎಂದಿದ್ದಾರೆ ಚಾಣಕ್ಯ.
ಅಗ್ನಿ, ಗುರು, ಬ್ರಾಹ್ಮಣ, ಗೋವು, ಕುಮಾರಿ ಕನ್ಯೆ, ವೃದ್ಧರು ಹಾಗೂ ಬಾಲಕನಿಗೆ ಎಂದೂ ನಿಮ್ಮ ಕಾಲನ್ನು ತಾಗಿಸಬಾರದಂತೆ. ಒದೆಯಬಾರದಂತೆ.
ಬ್ರಾಹ್ಮಣರ ಜ್ಞಾನದ ಬಗ್ಗೆ ಎಂದೂ ನಿರ್ಲಕ್ಷ್ಯ ಬೇಡ ಎಂದಿದ್ದಾರೆ ಚಾಣಕ್ಯ. ಹಾಗೆ ಮಹಿಳೆಯ ಸೌಂದರ್ಯದ ಬಗ್ಗೆ ಅಪಹಾಸ್ಯ ಮಾಡಬೇಡಿ ಎಂದಿದ್ದಾರೆ.
ಸುಂದರವಾಗಿರುವ ಹುಡುಗಿಯನ್ನು ಮದುವೆಯಾಗಬೇಡಿ. ಸಾಮಾನ್ಯವಾಗಿ ಪುರುಷ, ಹುಡುಗಿಯರ ಸೌಂದರ್ಯವನ್ನು ನೋಡುತ್ತಾನೆ. ಶೇಕಡಾ 90 ರಷ್ಟು ಮಂದಿ ಸುಂದರವಾಗಿರುವ ಹುಡುಗಿಯರನ್ನು ಮದುವೆಯಾಗಲು ಬಯಸುತ್ತಾರೆ. ಸುಂದರವಾಗಿರುವ ಹುಡುಗಿ ಬುದ್ಧಿವಂತೆಯಾಗಿರಬೇಕೆಂದೇನೂ ಇಲ್ಲ. ಹಾಗಾಗಿ ಸೌಂದರ್ಯ ನೋಡುವ ಬದಲು ಒಳ್ಳೆಯ ವಿಚಾರ ಮಾಡುವ ಹುಡುಗಿ ಜೊತೆ ಮದುವೆಯಾಗಿ ಎಂದು ಚಾಣಕ್ಯ ಹೇಳಿದ್ದಾರೆ.
ಆಲೋಚನೆ ಮಾಡದೆ ಕೆಲಸ ಮಾಡಿದ್ರೆ ಸಫಲತೆ ಸಿಗುವುದಿಲ್ಲ. ಹಾಗಾಗಿ ಯಾವುದೇ ಕೆಲಸ ಮಾಡುವ ಮೊದಲು ಏಕೆ? ಏನು? ಹೇಗೆ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಿ ಎಂದಿದ್ದಾರೆ ಚಾಣಕ್ಯ.