ಪ್ರಾಚೀನ ಕಾಲದಿಂದಲೂ ರಾತ್ರಿ ಉಗುರು ಕತ್ತರಿಸಬಾರದು ಎಂಬ ಪದ್ಧತಿಯೊಂದಿದೆ. ಈಗ್ಲೂ ಅನೇಕರು ಆ ನಿಯಮವನ್ನು ಪಾಲಿಸಿಕೊಂಡು ಬಂದಿದ್ದಾರೆ. ಸ್ವಚ್ಛತೆಗಾಗಿ ಉಗುರು ಕತ್ತರಿಸಿಕೊಳ್ಳಬೇಕು. ಉಗುರು ಕತ್ತರಿಸಲು ಸಮಯ ಬೇಕಿಲ್ಲವೆನ್ನುತ್ತಾರೆ. ಆದ್ರೆ ಪ್ರಾಚೀನ ಕಾಲದಲ್ಲಿ ಉಗುರು ಕತ್ತರಿಸದಿರಲು ಅನೇಕ ಕಾರಣಗಳಿದ್ದವು.
ಪ್ರಾಚೀನ ಕಾಲದಲ್ಲಿ ವಿದ್ಯುತ್ ಬೆಳಕಿರಲಿಲ್ಲ. ಚಿಮ್ಮಣಿ ದೀಪಗಳಲ್ಲಿ ರಾತ್ರಿ ಕಳೆಯುತ್ತಿದ್ದರು. ವಸ್ತುಗಳು ಸ್ಪಷ್ಟವಾಗಿ ಕಾಣ್ತಿರಲಿಲ್ಲ. ಹಾಗಾಗಿ ಬ್ಲೇಡಿನಂತಹ ಅಪಾಯಕಾರಿ ವಸ್ತುಗಳನ್ನು ಹೆಚ್ಚಾಗಿ ಬಳಸುತ್ತಿರಲಿಲ್ಲ.
ನೇಲ್ ಕಟರ್ ಕೂಡ ಅವ್ರ ಬಳಿ ಇರಲಿಲ್ಲ. ಚಾಕು ಅಥವಾ ಕತ್ತಿಯನ್ನು ಉಗುರು ಕತ್ತರಿಸಲು ಅವ್ರು ಬಳಸುತ್ತಿದ್ದರು. ಕತ್ತಲಲ್ಲಿ ಉಗುರಿನ ಬದಲು ಕೈ ಕತ್ತರಿಸಿಕೊಳ್ಳುವ ಅಪಾಯವಿತ್ತು.
ಕತ್ತರಿಸಿದ ಉಗುರನ್ನು ಮಾಟ, ಮಂತ್ರಕ್ಕೆ ಬಳಸಲಾಗುತ್ತದೆ ಎಂಬ ನಂಬಿಕೆಯಿದೆ. ರಾತ್ರಿ ಕತ್ತರಿಸಿದ ಉಗುರು ಶತ್ರುಗಳ ಕೈಗೆ ಸಿಕ್ಕಿ ಮಾಟ, ಮಂತ್ರಕ್ಕೆ ಬಳಕೆಯಾದ್ರೆ ನಷ್ಟ ನಮಗೆ ಎನ್ನುವ ಕಾರಣಕ್ಕೆ ಪ್ರಾಚೀನ ಕಾಲದ ಜನರು ರಾತ್ರಿ ಉಗುರು ಕತ್ತರಿಸಿಕೊಳ್ಳುತ್ತಿರಲಿಲ್ಲ.