ಗ್ರೀನ್ ಟೀ ಸೇವನೆಯಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ ಎಂದು ಹೇಳಿರುವುದನ್ನು ಕೇಳಿರಬಹುದು. ಅದರ ಸತ್ಯಾಸತ್ಯತೆಗಳ ಬಗ್ಗೆ ನಿಮಗೆಷ್ಟು ತಿಳಿದಿದೆ…?
ಗ್ರೀನ್ ಟೀಯಲ್ಲಿ ಹಲವು ಪೋಷಕಾಂಶಗಳಿವೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಉತ್ತಮ ಆಂಟಿ ಆಕ್ಸಿಡೆಂಟ್ ಗಳಿವೆ. ಇದು ಹೃದಯ ಸಂಬಂಧಿ ರೋಗಗಳನ್ನು ಕಡಿಮೆಗೊಳಿಸುತ್ತದೆ. ಮೂತ್ರಪಿಂಡ ಹಾಗೂ ಯಕೃತ್ ನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
ತೂಕ ಇಳಿಸಲು ಬಯಸುವವರು ನಿತ್ಯ ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಸೇವಿಸಬೇಕು. ಇದರಿಂದ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗುತ್ತದೆ. ಇವುಗಳ ರೆಡಿ ಪ್ಯಾಕೆಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ಇವುಗಳ ತಯಾರಿಯು ಈಗ ಬಲು ಸುಲಭ.
ಇದರ ಪ್ಯಾಕೆಟ್ ಅನ್ನು ಬೆಚ್ಚಗಿನ ನೀರಿನಲ್ಲಿ ಮುಳುಗಿಸಿ ಮೂರು ನಿಮಿಷ ಇಟ್ಟರೆ ಸಾಕು, ಗ್ರೀನ್ ಟೀ ಕುಡಿಯಲು ಸಿದ್ಧವಾಗುತ್ತದೆ. ಇದಕ್ಕೆ ಹಾಲು – ಸಕ್ಕರೆ ಬಳಸಬೇಕಿಲ್ಲ. ಪ್ರವಾಸ ಅಥವಾ ಚಾರಣ ವೇಳೆ ಗ್ರೀನ್ ಟೀ ಬ್ಯಾಗ್ ಗಳನ್ನು ಒಯ್ಯುವುದೂ ಸುಲಭ. ಬೇಕೆನಿಸಿದಾಗ ತಯಾರಿಸಿ ಕುಡಿಯುವುದೂ ಸುಲಭ.