ನಿಮ್ಮ ಮಕ್ಕಳು ಪದೇಪದೇ ಕೋಪಗೊಳ್ಳುತ್ತಾರೆಯೇ, ಕಿರಿಕಿರಿ ಮಾಡುತ್ತಾರೆಯೇ. ಅವರು ಬೆಳೆದು ದೊಡ್ಡವರಾಗುತ್ತಿದ್ದಂತೆ ಇದೆಲ್ಲ ಸರಿಯಾಗುತ್ತದೆ ಅಂದುಕೊಂಡರೆ ಅದು ನಿಮ್ಮ ತಪ್ಪು. ಬಾಲ್ಯದಲ್ಲೇ ಎಲ್ಲ ವಿಷಯಗಳನ್ನು ಮಕ್ಕಳಿಗೆ ಅರ್ಥ ಮಾಡಿಸುವುದು ಬಹಳ ಮುಖ್ಯ.
ಮಗುವಿನ ಕೆಟ್ಟ ಅಭ್ಯಾಸಗಳನ್ನು ಬೆಳೆಯಲು ಬಿಡಬಾರದು. ಬಾಲ್ಯದಲ್ಲಿ ಅವರನ್ನು ತಿದ್ದಿ ಸರಿ ದಾರಿಗೆ ತರಬೇಕು. ಮಕ್ಕಳು ನಮ್ಮೊಂದಿಗೆ ವ್ಯವಹರಿಸುವಾಗ ಅವರನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಬೇಕು. ಮಗುವಿಗೆ ಸಾಕಷ್ಟು ಸಮಯ ಕೊಡುವುದು ಬಹಳ ಮುಖ್ಯ. ಅದು ಸಾಧ್ಯವಾಗದಾಗ ಕಿರಿಕಿರಿಗಳ ಮೂಲಕ ಮಗು ನಿಮ್ಮನ್ನು ಸೆಳೆಯಲು ಪ್ರಯತ್ನಿಸುತ್ತದೆ. ಹಾಗಾಗಿ ಮಕ್ಕಳಿಗೆ ಸಾಕಷ್ಟು ಸಮಯ ನೀಡಿ.
ಅವರೊಂದಿಗೆ ಮಾತನಾಡಿ ಶಾಲೆಯ ವಿಷಯಗಳನ್ನು, ಗೆಳೆಯರ ಸಂಗತಿಗಳನ್ನು ಕೇಳಿ ತಿಳಿದುಕೊಳ್ಳಿ. ಬೇಕಿದ್ದಾಗ ಸಲಹೆಗಳನ್ನು ನೀಡಿ. ಮಗು ಹೈಪರ್ಯಾಕ್ಟಿವ್ ಆಗಿದ್ದರೆ ವೈದ್ಯರ ಸಲಹೆ ತೆಗೆದುಕೊಳ್ಳಿ.
ಮಗುವಿನ ನಡವಳಿಕೆಯನ್ನು ಅರ್ಥ ಮಾಡಿಕೊಳ್ಳಿ. ಆಗಾಗ ಶಿಕ್ಷಕರನ್ನು ಭೇಟಿಯಾಗಿ. ಮಗುವಿಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ ಅದರಲ್ಲಿ ಮುಂದುವರಿಯಲು ಅವಕಾಶ ನೀಡಿ.