
ಬಾಣಂತಿ ಮಹಿಳೆಯರು ಆದಷ್ಟು ತಮ್ಮ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಬೇಕು. ಮಗುವಿಗೆ ಸಮಸ್ಯೆಯಾಗದಂತಹ ಆಹಾರ ಸೇವನೆ ಮಾಡಬೇಕು.
ಅಲ್ಲದೆ, ಈ ಸಂದರ್ಭದಲ್ಲಿ ಬಾಣಂತಿಯರ ದೇಹ ಸೂಕ್ಷ್ಮವಾಗಿದ್ದು, ಬೇಗನೇ ಅನಾರೋಗ್ಯಕ್ಕೊಳಗಾಗುವ ಸಾಧ್ಯತೆಯಿದೆ. ಹೀಗಾಗಿ ಕೆಲವು ಆಹಾರಗಳನ್ನು ಕಡೆಗಣಿಸುವುದೇ ಒಳ್ಳೆಯದು.
ಮಸಾಲೆ
ಆದಷ್ಟು ಮಸಾಲೆ ಇರುವ ಆಹಾರ ಸೇವಿಸದಿರಿ. ಈ ಸಂದರ್ಭದಲ್ಲಿ ಮಸಾಲೆ ಪದಾರ್ಥಗಳನ್ನು ಅತಿಯಾಗಿ ಸೇವಿಸಿದರೆ ಅದರ ಪರಿಣಾಮ ಮಗುವಿನ ಮೇಲಾಗಬಹುದು.
ಕೆಫೀನ್
ಕೆಫೀನ್ ಅಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸದಿರಿ. ಹಾಲುಣಿಸುವ ತಾಯಿ ಇದನ್ನು ಸೇವಿಸುವುದರಿಂದ ಮಗುವಿನ ನಿದ್ರೆಗೆ ಸಮಸ್ಯೆಯಾಗಬಹುದು.
ಮೀನು
ಮೀನು ನಿಮ್ಮ ಪ್ರಿಯ ಆಹಾರವಾಗಿದ್ದರೂ, ನಾಲಿಗೆಗೆ ಕಡಿವಾಣ ಹಾಕಿ. ಹಾಲುಣಿಸುವ ತಾಯಿ ಇದನ್ನು ಸೇವಿಸಿದರೆ ಮಗುವಿನ ಮೆದುಳಿನ ಮೇಲೆ ಪರಿಣಾಮ ಬೀರಬಹುದು.
ಹುಳಿ ಹಣ್ಣು
ಹುಳಿಭರಿತ ಹಣ್ಣುಗಳಾದ ನಿಂಬೆ, ಕಿತ್ತಳೆ, ದ್ರಾಕ್ಷಿ ಸೇವಿಸದಿರಿ. ಇದರಿಂದ ಮಗುವಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗಿ ಬೇಧಿಯಂತಹ ಜೀರ್ಣ ಸಂಬಂಧಿ ಸಮಸ್ಯೆ ಬರಬಹುದು.