ದೇವಸ್ಥಾನ ಅಥವಾ ಮನೆ ಎಲ್ಲೆ ಆಗಿರಲಿ ಪೂಜೆ ಮಾಡುವ ವೇಳೆಯಲ್ಲಿ ಘಂಟಾನಾದವನ್ನು ಮೊಳಗಿಸುತ್ತಾರೆ. ಘಂಟೆಯ ಜೊತೆಗೆ ಜಾಗಟೆ, ಶಂಖ ಸೇರಿದ ಹಾಗೆ ಇನ್ನಿತರ ಮಂಗಳಕರ ವಾದ್ಯಗಳನ್ನು ಮೊಳಗಿಸುವುದು ಯಾಕೆ ಗೊತ್ತಾ?
ಈ ಮಂಗಳವಾದ್ಯದಿಂದ ಹೊರಹೊಮ್ಮುವ ಧ್ವನಿ ತರಂಗಗಳು ಮನೆ ಹಾಗೂ ಸುತ್ತಲಿನ ಪರಿಸರದಲ್ಲಿ ಸಕಾರಾತ್ಮಕ ತರಂಗಗಳನ್ನು ಹೊಮ್ಮಿಸುತ್ತವೆ. ಅಷ್ಟೇ ಅಲ್ಲ ಆರತಿ ವೇಳೆ ಬಾರಿಸುವ ಘಂಟೆಯ ಶಬ್ಧ ಕೇಳಿದ ಕೂಡಲೇ ಮನಸ್ಸು ಶಾಂತ ಸ್ಥಿತಿಗೆ ತಲುಪುತ್ತದೆ. ಯಾವುದೇ ಗೊಂದಲ, ತೊಳಲಾಟ ಇದ್ದರೂ ಘಂಟೆ, ಶಂಖದ ನಾದ ಕೇಳಿದರೆ ಮನಸ್ಸು ಪ್ರಶಾಂತವಾಗತ್ತೆ.
ಘಂಟೆ, ಶಂಖದ ನಾದ ಭಕ್ತನ ಮನಸ್ಸಿನ ಭಕ್ತಿಯನ್ನು ಜಾಗೃತಗೊಳಿಸುವ ಒಂದು ಮಾರ್ಗ ಕೂಡ. ಪ್ರತಿ ನಿತ್ಯವೂ ಪೂಜೆ ಮಾಡುವಾಗ ಮಂಗಳವಾದ್ಯಗಳನ್ನ ಮೊಳಗಿಸುವ ಅಭ್ಯಾಸ ಬಹಳಷ್ಟು ಮನೆಗಳಲ್ಲಿ ಇದೆ. ಇದು ವೈದಿಕ ಕಾಲದಿಂದಲೂ ಆಚರಣೆಗೆ ಬಂದಿರುವ ವಿಶಿಷ್ಟ ಆಚರಣೆ.