
ಸೀಲಿಂಗ್ ಫ್ಯಾನ್ ಅಥವಾ ಟೇಬಲ್ ಫ್ಯಾನ್ ಈಗ ಎಲ್ಲರ ಮನೆಯಲ್ಲೂ ಇರುತ್ತೆ. ಬೇಸಿಗೆ ಕಾಲ ಆರಂಭವಾದರೆ ಸಾಕು ಬಹುತೇಕ ಮಂದಿಯ ಮನೆಯಲ್ಲಿ ಇಪ್ಪತ್ನಾಲ್ಕು ಗಂಟೆ ಫ್ಯಾನ್ ತಿರುಗುತ್ತಲೇ ಇರುತ್ತದೆ. ಇನ್ನು ಕೆಲವರಂತೂ ಬೇಸಿಗೆ, ಚಳಿಯ ಪರಿವಿಲ್ಲದೆ ಯಾವಾಗಲೂ ಫ್ಯಾನ್ ಉಪಯೋಗಿಸುತ್ತಾರೆ. ಹೀಗೆ ಫ್ಯಾನ್ ಬಳಸುವ ನಿಮಗೆ ಅದಕ್ಕೆ 3 ರೆಕ್ಕೆಗಳು ಏಕಿರುತ್ತೆ ಅಂತ ಗೊತ್ತಾ..?
ವೈಜ್ಞಾನಿಕವಾಗಿ ಹೇಳುವುದಾದರೆ ಫ್ಯಾನ್ ನಲ್ಲಿ ರೆಕ್ಕೆ ಗಳು ಎಷ್ಟು ಕಡಿಮೆ ಇರುತ್ತದೆಯೋ ಅಷ್ಟು ಹೆಚ್ಚು ಗಾಳಿಯನ್ನು ಅದು ಕೊಡುತ್ತದೆ. ಹಾಗಾಗಿ ಸೆಕೆ ಹೆಚ್ಚಿರುವ ಭಾರತದಂತ ದೇಶದಲ್ಲಿ ಫ್ಯಾನ್ ಗೆ ಮೂರು ರೆಕ್ಕೆಗಳು ಬರುತ್ತವೆ. ತಂಪಾದ ಗಾಳಿ ಬೀಸಲಿ ಎನ್ನುವ ಕಾರಣಕ್ಕೆ ಮೂರು ರೆಕ್ಕೆ ಬಳಸಿ ಫ್ಯಾನ್ ಸಿದ್ಧಪಡಿಸಲಾಗುತ್ತದೆ.
ಆದ್ರೆ ವಿದೇಶದಲ್ಲಿ ಮೂರು ರೆಕ್ಕೆ ಬದಲು ನಾಲ್ಕು ರೆಕ್ಕೆಯ ಫ್ಯಾನ್ ಗಳನ್ನು ನೀವು ನೋಡಬಹುದು. ಚಳಿ ಹೆಚ್ಚಿರುವ ದೇಶಗಳಲ್ಲಿ 4 ರೆಕ್ಕೆಗಳಿರುವ ಫ್ಯಾನ್ ಬಳಸಲಾಗುತ್ತದೆ. ಅಲ್ಲಿನ ತಂಪಿನ ವಾತಾವರಣಕ್ಕೆ ಮಧ್ಯಮ ಗತಿಯಲ್ಲಿ ತಿರುಗುವ ಫ್ಯಾನ್ ಸಾಕಾಗುತ್ತದೆ. ಹಾಗಾಗಿ ವಿದೇಶಗಳಲ್ಲೆಲ್ಲ 4 ರೆಕ್ಕೆಗಳಿರುವ ಫ್ಯಾನ್ ಗಳನ್ನೇ ಹೆಚ್ಚು ಬಳಸುತ್ತಾರೆ.