ಒಂಟಿತನ ಬಹಳಷ್ಟು ಜನರನ್ನು ಕಾಡುವ ಸಮಸ್ಯೆಗಳಲ್ಲೊಂದು. ವೇಗದ ಜೀವನಶೈಲಿಯೂ ಇದಕ್ಕೆ ಪ್ರಮುಖ ಕಾರಣ. ಸ್ನೇಹಿತರು, ಕುಟುಂಬಸ್ಥರು ಜೊತೆಯಲ್ಲಿದ್ದರೂ ಅನೇಕರು ಒಂಟಿತನವನ್ನು ಅನುಭವಿಸುತ್ತಾರೆ.
ಒಂಟಿತನ ಎಂದರೇನು?
ಒಂಟಿತನ ಒಂದು ರೀತಿಯ ಮಾನಸಿಕ ಯಾತನೆ. ಇದರಲ್ಲಿ ವ್ಯಕ್ತಿ ಎಲ್ಲರಿಂದ ಪ್ರತ್ಯೇಕತೆಯನ್ನು ಅನುಭವಿಸುತ್ತಾನೆ. ಒಂಟಿತನದಿಂದ ಬಳಲುವವರು ಸಾಮಾನ್ಯವಾಗಿ ಒಳಗಿನಿಂದ ಅತೃಪ್ತರಾಗಿರುತ್ತಾರೆ. ಅಧ್ಯಯನದ ಪ್ರಕಾರ ಭಾರತದಲ್ಲಿ 4.91 ಮಿಲಿಯನ್‌ಗೂ ಅಧಿಕ ಜನರು ಏಕಾಂಗಿಯಾಗಿ ವಾಸಿಸುತ್ತಿದ್ದಾರೆ ಮತ್ತು ಒಂಟಿತನದಿಂದ ಬಳಲುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೃಹಿಣಿಯರು ಒಂಟಿತನಕ್ಕೆ ಬಲಿಯಾಗುತ್ತಿದ್ದಾರೆ.
ಸಂಶೋಧನೆಯ ಪ್ರಕಾರ ಮಹಿಳೆಯರು ತಮ್ಮ ಒಂಟಿತನವನ್ನು ಹೆಚ್ಚು ವ್ಯಕ್ತಪಡಿಸುತ್ತಾರೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ವಿಭಿನ್ನ ಮೆದುಳಿನ ರಚನೆಯನ್ನು ಹೊಂದಿದ್ದಾರೆ. ಭಾವನೆಗಳನ್ನು ವಿಭಿನ್ನವಾಗಿ ವ್ಯಕ್ತಪಡಿಸುತ್ತಾರೆ. ಪುರುಷರು ತಮ್ಮ ಒಂಟಿತನ ಮತ್ತು ಭಾವನೆಗಳನ್ನು ಹೆಚ್ಚು ಮರೆಮಾಡಿದರೆ, ಮಹಿಳೆಯರು ಅದನ್ನು ಮರೆಮಾಡಲು ಸಾಧ್ಯವಾಗುವುದಿಲ್ಲ.
ಸ್ಕಿಜೋಫ್ರೇನಿಯಾ ಕೂಡ ಇದೇ ತೆರನಾದ ಸಮಸ್ಯೆಗಳಲ್ಲೊಂದು. ಸ್ಕಿಜೋಫ್ರೇನಿಯಾದ ಲಕ್ಷಣಗಳು ಕಂಡುಬಂದಲ್ಲಿ ಪುರುಷರು ತನ್ನ ಕಾಯಿಲೆಯ ಬಗ್ಗೆ ತನ್ನ ಸ್ನೇಹಿತರೊಂದಿಗೆ ಚರ್ಚಿಸುತ್ತಾರೆ. ಮಹಿಳೆಯರು ಅಂತಹ ಕಾಯಿಲೆಯಿಂದ ಬಳಲುತ್ತಿದ್ದರೆ, ಅವರು ತಮ್ಮ ಸುತ್ತಮುತ್ತಲಿನ ಜನರೊಂದಿಗೆ ಅದನ್ನು ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಯಾರೊಂದಿಗೂ ಬೇಗ ಬೆರೆಯಲು ಇಚ್ಛಿಸುವುದಿಲ್ಲ. ಮದುವೆಯ ನಂತರದ ಆರಂಭಿಕ ದಿನಗಳಲ್ಲಿ ಮಹಿಳೆಯರು ತುಂಬಾ ಒಂಟಿತನವನ್ನು ಅನುಭವಿಸುತ್ತಾರೆ. ಆದರೆ ಪುರುಷರು ಇದನ್ನು ನಂತರ ಅರಿತುಕೊಳ್ಳುತ್ತಾರೆ. ಪುರುಷರು ಹೆಚ್ಚಾಗಿ ತಮ್ಮ ಭಾವನೆಗಳನ್ನು ನಿಗ್ರಹಿಸಲು ಬಯಸುತ್ತಾರೆ.
ಒಂಟಿತನದಿಂದಾಗಿ ಜನರು ಹೆಚ್ಚಾಗಿ ಖಿನ್ನತೆಗೆ ಒಳಗಾಗುತ್ತಾರೆ. ಸಂಶೋಧಕರ ಪ್ರಕಾರ ಇದು ನಿದ್ರೆಯ ಕೊರತೆಯಿಂದಾಗಿರಬಹುದು. ನಂತರ ಜನರು ಖಿನ್ನತೆಗೆ ಬಲಿಯಾಗುತ್ತಾರೆ. ಭಾವನೆಗಳು ತಮ್ಮನ್ನು ಪ್ರತ್ಯೇಕಿಸಲು ಮತ್ತು ಇತರರು ಸ್ವೀಕರಿಸಲು ನಿರಾಕರಿಸಿದಾಗ ಅದು ಸ್ವಯಂ ವಿನಾಶವಾಗಿ ಬದಲಾಗುತ್ತದೆ.
ಒಂಟಿತನವನ್ನು ಎದುರಿಸಲು ವಿಶೇಷ ಮಾರ್ಗಗಳು
ಒಂಟಿತನವನ್ನು ಎದುರಿಸಲು ಬಯಸಿದರೆ ಕುಟುಂಬ, ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಬೆರೆಯಲು ಪ್ರಾರಂಭಿಸಬೇಕು. ಸೃಜನಾತ್ಮಕವಾದ ಕೆಲಸದ ಕಡೆಗೆ ಗಮನ ಕೇಂದ್ರೀಕರಿಸಿ. ವೈದ್ಯರ ಸಲಹೆ ಮತ್ತು ಚಿಕಿತ್ಸೆ ಪಡೆಯುವುದು ಅವಶ್ಯಕ. ಸಮಾನ ಮನಸ್ಕ ಜನರನ್ನು ಭೇಟಿ ಮಾಡಿ.