alex Certify ಭಾರತದಲ್ಲಿ ಒಂದೇ ಒಂದು ಬಜೆಟ್ ಅನ್ನೂ ಮಂಡಿಸದ ಹಣಕಾಸು ಸಚಿವರು ಯಾರು ಗೊತ್ತಾ…..? ಇಲ್ಲಿದೆ ಕುತೂಹಲಕಾರಿ ಸಂಗತಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಒಂದೇ ಒಂದು ಬಜೆಟ್ ಅನ್ನೂ ಮಂಡಿಸದ ಹಣಕಾಸು ಸಚಿವರು ಯಾರು ಗೊತ್ತಾ…..? ಇಲ್ಲಿದೆ ಕುತೂಹಲಕಾರಿ ಸಂಗತಿ…..!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 23 ರಂದು 7ನೇ ಬಾರಿಗೆ ದೇಶದ ಬಜೆಟ್ ಮಂಡಿಸಲಿದ್ದಾರೆ. ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಆಗಿರುವುದರಿಂದ ಈ ಬಗ್ಗೆ ಸಾಕಷ್ಟು ಕುತೂಹಲವಿದೆ. ಜೀತ ವರ್ಗದಿಂದ ಹಿಡಿದು ರೈತರವರೆಗೆ ಎಲ್ಲರೂ ಬಜೆಟ್ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಬಜೆಟ್‌ನಲ್ಲಿ ಸರ್ಕಾರವು ತೆರಿಗೆ ಮಿತಿಯನ್ನು ಬದಲಾಯಿಸಬಹುದು. ರೈತರಿಗಾಗಿ ಇನ್ನಷ್ಟು ಯೋಜನೆಗಳನ್ನು ಘೋಷಿಸಬಹುದು.

ಬಜೆಟ್‌ನಲ್ಲಿ ಇಡೀ ಹಣಕಾಸು ವರ್ಷದ ವೆಚ್ಚದ ಲೆಕ್ಕವನ್ನು ಸರ್ಕಾರ ಮಂಡಿಸುತ್ತದೆ. ಈ ಪ್ರಕ್ರಿಯೆ ಮೊದಲು ಆರಂಭವಾಗಿದ್ದು ಬ್ರಿಟನ್‌ನಲ್ಲಿ. ಬ್ರಿಟಿಷರ ಕಾಲದಲ್ಲಿ ಮೊದಲ ಬಾರಿಗೆ 1860ರ ಎಪ್ರಿಲ್‌ 7ರಂದು ಬಜೆಟ್ ಮಂಡಿಸಲಾಯಿತು. ಸ್ವಾತಂತ್ರ್ಯದ ನಂತರವೂ ಬಜೆಟ್ ಮಂಡನೆಯ ಪ್ರಕ್ರಿಯೆ ಮುಂದುವರಿಯಿತು.

ಒಂದು ಬಾರಿಯೂ ಬಜೆಟ್ ಮಂಡಿಸದ ವಿತ್ತ ಸಚಿವರು ಭಾರತದಲ್ಲಿದ್ದಾರೆ. 1948ರಲ್ಲಿ 35 ದಿನಗಳ ಕಾಲ ಹಣಕಾಸು ಸಚಿವರಾಗಿದ್ದ ಕೆ.ಸಿ.ನಿಯೋಗಿ ಅವರು ಒಂದೇ ಒಂದು ಬಜೆಟ್ ಅನ್ನೂ ಮಂಡಿಸದ ಏಕೈಕ ಹಣಕಾಸು ಸಚಿವ ಎನಿಸಿಕೊಂಡಿದ್ದಾರೆ. ಅವರ ನಂತರ ಜಾನ್ ಮಥಾಯ್ ಭಾರತದ ಮೂರನೇ ಹಣಕಾಸು ಸಚಿವರಾದರು.

ಬೆಳಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಬಜೆಟ್ ಮಂಡಿಸಲಾಗುತ್ತದೆ. ಈ ಹಿಂದೆ ಬ್ರಿಟಿಷರ ಕಾಲದಲ್ಲಿ ಬಜೆಟ್ ಮಂಡನೆ ಸಮಯ ಸಂಜೆ 5 ಗಂಟೆಯಾಗಿತ್ತು. ಅಂದು ರಾತ್ರಿಯಿಡೀ ಬಜೆಟ್ ಕುರಿತ ಕೆಲಸ ಮಾಡುವ ಅಧಿಕಾರಿಗಳಿಗೆ ಸ್ವಲ್ಪ ವಿಶ್ರಾಂತಿ ಸಿಗಲಿ ಎಂದು ಹೀಗೆ ಮಾಡಲಾಗಿತ್ತು. ಆದರೆ ನಂತರ 1999ರಲ್ಲಿ ಬಜೆಟ್‌ನ ಸಮಯವನ್ನು ಬೆಳಗ್ಗೆ 11 ಗಂಟೆಗೆ ಬದಲಾಯಿಸಲಾಯಿತು.

ಭಾರತದಲ್ಲಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆ ಮೊರಾರ್ಜಿ ದೇಸಾಯಿ ಹೆಸರಿನಲ್ಲಿದೆ. ಮೊರಾರ್ಜಿ ದೇಸಾಯಿ ಅವರು ಹಣಕಾಸು ಸಚಿವರಾಗಿ 10 ಬಾರಿ ದೇಶದ ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ ಎರಡು ಮಧ್ಯಂತರ ಬಜೆಟ್‌ಗಳು ಸೇರಿವೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿ ಏಳನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ.

ಮೊದಮೊದಲು ಬ್ರಿಟನ್ನಿನ ಹಣಕಾಸು ಸಚಿವರು ಸಂಸತ್ತಿನಲ್ಲಿ ಸರ್ಕಾರದ ಖರ್ಚು-ವೆಚ್ಚ, ಆದಾಯದ ಮಾಹಿತಿಯನ್ನು ಕೆಂಪು ತೊಗಲು ಚೀಲದಲ್ಲಿ ತರುತ್ತಿದ್ದರು. ಆದರೆ ಬಿಜೆಪಿ ಸರ್ಕಾರ ಕೆಂಪು ಚೀಲದ ಸಂಪ್ರದಾಯಕ್ಕೆ ಕಡಿವಾಣ ಹಾಕಿತು.

2006ರಲ್ಲಿ ಅಂದಿನ ಹಣಕಾಸು ಸಚಿವ ಪಿ.ಚಿದಂಬರಂ ಮೊದಲ ಬಾರಿಗೆ ಬಜೆಟ್‌ನಲ್ಲಿ ಜಿಎಸ್‌ಟಿ ಬಗ್ಗೆ ಮಾತನಾಡಿದರು. ಯುಪಿಎ-2ನೇ  ಅವಧಿಯಲ್ಲಿ ಚಿದಂಬರಂ ಮೊದಲ ಬಾರಿಗೆ ರಾಷ್ಟ್ರೀಯ ಏಕ ತೆರಿಗೆ ಕುರಿತು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 30 ವರ್ಷಗಳ ಕಾಲ ಮಂಡಿಸಿದ ಸಾಮಾನ್ಯ ಬಜೆಟ್‌ನಲ್ಲಿ ಮೂಲಸೌಕರ್ಯ ಎಂಬ ಪದವನ್ನೇ ಬಳಸಿರಲಿಲ್ಲ. ಈ ಪದವು 1990 ರಲ್ಲಿ ಚರ್ಚೆಯ ವಿಷಯವಾಯಿತು. ಈಗ ಅದೇ ಪದ ಆರ್ಥಿಕತೆಯಲ್ಲಿ ವಿಶೇಷ ಸ್ಥಾನವನ್ನು ಉಳಿಸಿಕೊಂಡಿದೆ.

ಸಾಮಾನ್ಯ ಬಜೆಟ್‌ನಲ್ಲಿ ಮಹಿಳೆಯರಿಗೆ ಯಾವುದೇ ಸೌಲಭ್ಯಗಳು ಸಿಗುತ್ತಿರಲಿಲ್ಲ. 1980ರವರೆಗೂ ಸಾಮಾನ್ಯ ಬಜೆಟ್‌ನಲ್ಲಿ ಮಹಿಳಾ ಸಮಸ್ಯೆಗಳ ಪ್ರಸ್ತಾಪವೇ ಇರಲಿಲ್ಲ. ಇದಾದ ನಂತರ ಮಹಿಳೆಯರ ಸಮಸ್ಯೆ ಮತ್ತು ಅಗತ್ಯ ಸೌಲಭ್ಯಗಳ ಕುರಿತು ಬಜೆಟ್‌ನಲ್ಲಿ ಉಲ್ಲೇಖ ಆರಂಭವಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...