ಮನೆಯಲ್ಲಿ ಅಲಂಕಾರಕ್ಕಾಗಿ ಬಣ್ಣ ಬಣ್ಣದ ಮೇಣದ ಬತ್ತಿಗಳನ್ನು ಹಚ್ಚುತ್ತಾರೆ. ಆದರೆ ಇದನ್ನು ಹಚ್ಚುವಾಗ ವಾಸ್ತು ಶಾಸ್ತ್ರದ ಪ್ರಕಾರ ಹಚ್ಚಿದರೆ ತುಂಬಾ ಒಳ್ಳೆಯದು. ಇಲ್ಲವಾದರೆ ದಾರಿದ್ರ್ಯಗಳು ಕಾಡುವುದು ಖಚಿತ. ಹಾಗಾದ್ರೆ ವಾಸ್ತು ಪ್ರಕಾರ ಯಾವ ಬಣ್ಣದ ಮೇಣದ ಬತ್ತಿಯನ್ನು ಯಾವ ದಿಕ್ಕಿಗೆ ಹಚ್ಚಿದರೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.
ಆಗ್ನೇಯ ದಿಕ್ಕಿನಲ್ಲಿ ಹಸಿರು ಬಣ್ಣದ ಮೇಣದಬತ್ತಿ ಬೆಳಗಿದರೆ ಒಳ್ಳೆಯದು. ಇದರಿಂದ ವ್ಯವಹಾರದಲ್ಲಿ ಅಭಿವೃದ್ಧಿಯಾಗುತ್ತದೆ.
ಈಶಾನ್ಯ ದಿಕ್ಕಿನಲ್ಲಿ ಬಿಳಿ ಬಣ್ಣದ ಮೇಣದ ಬತ್ತಿಯನ್ನು ಇಡುವುದು ಉತ್ತಮ. ಇದರಿಂದ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ.
ನೈರುತ್ಯ ದಿಕ್ಕಿನಲ್ಲಿ ಹಳದಿ ಬಣ್ಣದ ಮೇಣದ ಬತ್ತಿಯನ್ನು ಇಟ್ಟರೆ ಒಳ್ಳೆಯದು. ಇದರಿಂದ ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತದೆ. ಕುಟುಂಬ ಸದಸ್ಯರು ಆರೋಗ್ಯದಿಂದಿರುತ್ತಾರೆ.
ವಾಯುವ್ಯ ದಿಕ್ಕಿನಲ್ಲಿ ಬಿಳಿ ಬಣ್ಣದ ಮೇಣದ ಬತ್ತಿಯನ್ನು ಹಚ್ಚಿದರೆ ಉತ್ತಮ. ಇದರಿಂದ ನೀವು ಮಾನಸಿಕವಾಗಿ ಸದೃಢರಾಗುತ್ತೀರಿ.