alex Certify ಕಾರುಗಳೇ ಇಲ್ಲದ ಜಗತ್ತಿನ ಏಕೈಕ ಸ್ಥಳ ಎಲ್ಲಿದೆ ಗೊತ್ತಾ ? ಇಲ್ಲಿದೆ ಇಂಟ್ರೆಸ್ಟಿಂಗ್ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರುಗಳೇ ಇಲ್ಲದ ಜಗತ್ತಿನ ಏಕೈಕ ಸ್ಥಳ ಎಲ್ಲಿದೆ ಗೊತ್ತಾ ? ಇಲ್ಲಿದೆ ಇಂಟ್ರೆಸ್ಟಿಂಗ್ ವಿವರ

ಸ್ವಂತ ಮನೆ ಹಾಗೂ ಐಷಾರಾಮಿ ಕಾರು ಎಲ್ಲರ ಕನಸು. ಬಹುತೇಕ ಎಲ್ಲ ಮನೆಗಳಲ್ಲಿಯೂ ಈಗ ಬೈಕ್‌ ಹಾಗೂ ಕಾರುಗಳಿರುತ್ತವೆ. ಒಂದಕ್ಕಿಂತ ಹೆಚ್ಚು ಕಾರುಗಳನ್ನು ಹೊಂದಿರುವುದು ಈಗ ಸ್ಟೇಟಸ್ ಸಿಂಬಲ್ ಆಗಿಬಿಟ್ಟಿದೆ. ಅಂತಹ ಪರಿಸ್ಥಿತಿಯಲ್ಲಿ ಒಂದೇ ಒಂದು ಕಾರು ಸಹ ಇಲ್ಲದ ಸ್ಥಳವನ್ನು ಕಲ್ಪಿಸಿಕೊಳ್ಳುವುದೂ ಕಷ್ಟ.

ವಿಶ್ವದ ಅತ್ಯಂತ ಅಭಿವೃದ್ಧಿ ಹೊಂದಿದ ದೇಶ ಎನಿಸಿಕೊಂಡಿರುವ ಅಮೆರಿಕದಲ್ಲಿ ಕಾರುಗಳೇ ಇಲ್ಲದ ವಿಶಿಷ್ಟ ಸ್ಥಳವಿದೆ. ಅಮೆರಿಕದ ಮ್ಯಾಕಿನಾಕ್ ದ್ವೀಪದಲ್ಲಿ ಸಂಚಾರಕ್ಕೆ ಸೈಕಲ್ ಮತ್ತು ಕುದುರೆ ಗಾಡಿಗಳನ್ನು ಮಾತ್ರ ಬಳಸಲಾಗುತ್ತದೆ.

ಮ್ಯಾಕಿನಾಕ್ ದ್ವೀಪವು ಅಮೆರಿಕದ ಮಿಚಿಗನ್‌ನಲ್ಲಿರುವ ಮ್ಯಾಕಿನಾಕ್ ಕೌಂಟಿಯಲ್ಲಿದೆ. ಅಲ್ಲಿ ಕಳೆದ 127 ವರ್ಷಗಳಿಂದ ಮೋಟಾರು ವಾಹನಗಳನ್ನು ನಿಷೇಧಿಸಲಾಗಿದೆ. 1898ರಿಂದ ಇಲ್ಲಿ ರೈಲುಗಳನ್ನು ಕೂಡ ನಿಷೇಧಿಸಲಾಗಿದೆ. ಹಾಗಾಗಿ ಇಡೀ ದ್ವೀಪದಲ್ಲಿ ಎಲ್ಲಿ ಹುಡುಕಿದರೂ ಕಾರು ಅಥವಾ ಇತರ ಮೋಟಾರು ವಾಹನಗಳು ಕಾಣಿಸುವುದಿಲ್ಲ. ಇದರಿಂದಾಗಿಯೇ ಈ ದ್ವೀಪದಲ್ಲಿನ ಗಾಳಿಯ ಗುಣಮಟ್ಟ ಉತ್ತಮವಾಗಿದೆ. ಮಾಲಿನ್ಯದ ನಡುವೆ ಬದುಕುತ್ತಿರುವ ಜನರಿಗೆ ಈ ಸ್ಥಳ ಸ್ವರ್ಗಕ್ಕಿಂತ ಕಡಿಮೆಯಿಲ್ಲ.

ದೋಣಿಯ ಮೂಲಕ ಹ್ಯುರಾನ್ ಸರೋವರದ ಬಳಿ ಇರುವ ಈ ನಗರವನ್ನು ತಲುಪಬಹುದು. ಈ ದ್ವೀಪದಲ್ಲಿ ಕೇವಲ 600 ಜನರಿದ್ದಾರೆ. ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ದ್ವೀಪವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಬರುತ್ತಾರೆ. ಜೂನ್‌ನಲ್ಲಿ ಈ ದ್ವೀಪದಲ್ಲಿ ನಡೆಯುವ ಲಿಲಾಕ್ ಫೆಸ್ಟಿವಲ್ ಬಹಳ ಜನಪ್ರಿಯವಾಗಿದೆ. ಇದರಲ್ಲಿ ಪಾಲ್ಗೊಳ್ಳಲು ದೂರದೂರುಗಳಿಂದ ಜನರು ಬರುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...