ಮದುವೆ ಬಹಳ ಪವಿತ್ರ ಸಂಬಂಧ ಎನ್ನುವ ಮಾತಿದೆ. ಈ ಬಂಧಕ್ಕೆ ಒಳಪಟ್ಟಾಗ ಪತಿ-ಪತ್ನಿ ಜೀವನದುದ್ದಕ್ಕೂ ಪರಸ್ಪರ ನಿಷ್ಠರಾಗಿರುವುದಾಗಿ ಭರವಸೆ ನೀಡುತ್ತಾರೆ. ಎಂದಿಗೂ ಪರಸ್ಪರ ದ್ರೋಹ ಮಾಡುವುದಿಲ್ಲ ಎಂದು ವಚನ ನೀಡುತ್ತಾರೆ. ಭಾರತದಲ್ಲಿ ಮದುವೆ ಬಳಿಕ ಶೇ.60 ರಷ್ಟು ದಂಪತಿಗಳು ತುಂಬಾ ಸಂತೋಷವಾಗಿರುತ್ತಾರೆ. ಶೇ.20 ರಷ್ಟು ಮಂದಿ ಭಿನ್ನಾಭಿಪ್ರಾಯವಿದ್ದರೂ ಅನುಸರಿಸಿಕೊಂಡು ಹೋಗುತ್ತಾರೆ. ಆದರೆ ಶೇ.20 ರಷ್ಟು ಮಂದಿ ಮದುವೆ ನಂತರ ಅಕ್ರಮ ಸಂಬಂಧ ಹೊಂದಿರುತ್ತಾರೆ ಎನ್ನಲಾಗಿದೆ.
ದಾಂಪತ್ಯ ಬದುಕಿನಲ್ಲಿ ಸಂಗಾತಿಗೆ ಈ ರೀತಿ ಮೋಸ ಮಾಡಲು ಅನೇಕ ಕಾರಣಗಳಿರಬಹುದು. ಕೌಟುಂಬಿಕ ಹಿಂಸೆ, ಸಂವಹನದ ಕೊರತೆ, ಗಮನದ ಕೊರತೆ, ಒಂಟಿತನ, ಮಕ್ಕಳ ಜವಾಬ್ದಾರಿ, ದೈಹಿಕ ಅತೃಪ್ತಿ, ಭಾವನಾತ್ಮಕ ಸಂಪರ್ಕದ ಕೊರತೆ, ಚಿಕ್ಕ ವಯಸ್ಸಿನಲ್ಲೇ ಮದುವೆ, ಇಷ್ಟವಿಲ್ಲದ ಮದುವೆ ಹೀಗೆ ಅನೇಕ ಕಾರಣಗಳಿಂದ ಅಕ್ರಮ ಸಂಬಂಧ ಹುಟ್ಟಿಕೊಳ್ಳುತ್ತದೆ.
ಸಂಬಂಧದಲ್ಲಿ ಪ್ರಣಯದ ಕೊರತೆಯಿದ್ದಾಗ ಜನರು ಹೆಚ್ಚುವರಿ ವೈವಾಹಿಕ ಸಂಬಂಧಗಳನ್ನು ಹೊಂದುತ್ತಾರೆ. ಅಕ್ರಮ ಸಂಬಂಧಗಳಿಂದ ಅನೇಕ ಸಂಸಾರಗಳು ಮುರಿದು ಬೀಳುತ್ತವೆ. ಈ ಅಕ್ರಮ ಸಂಬಂಧಗಳು ಎಲ್ಲಿಂದ ಪ್ರಾರಂಭವಾಗುತ್ತವೆ ಎಂಬುದನ್ನು ಯೋಚಿಸಿದ್ದೀರಾ? ಕೆಲವೊಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿ ಅಕ್ರಮ ಸಂಬಂಧಗಳು ಹುಟ್ಟಿಕೊಳ್ಳುತ್ತವೆ.
ಕಛೇರಿ – ಹೆಚ್ಚಿನ ವೈವಾಹಿಕ ಸಂಬಂಧಗಳು ಕಚೇರಿಯಲ್ಲಿ ಪ್ರಾರಂಭವಾಗುತ್ತವೆ. ಇದರ ಹಿಂದಿನ ದೊಡ್ಡ ಕಾರಣವೆಂದರೆ ಕಚೇರಿಯಲ್ಲಿ ವಿವಿಧ ರೀತಿಯ ಜನರನ್ನು ಭೇಟಿ ಮಾಡಲು ಇರುವ ಅವಕಾಶ.
ಜಿಮ್ – ಅನೇಕರು ವ್ಯಾಯಾಮ ಮಾಡುವಾಗ ಇತರರೊಂದಿಗೆ ಜಿಮ್‌ನಲ್ಲಿ ಸ್ನೇಹ ಬೆಳೆಸುತ್ತಾರೆ. ಅದು ಬಳಿಕ ಪ್ರಣಯಕ್ಕೆ ತಿರುಗುತ್ತದೆ. ಈ ವಿಷಯದಲ್ಲಿ ಮಹಿಳೆಯರು ಪುರುಷರಿಗಿಂತ ಮುಂದಿದ್ದಾರೆ. ಇದಕ್ಕೆ ಕಾರಣವೆಂದರೆ ಮಹಿಳೆಯರು ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ತನ್ನ ತರಬೇತುದಾರನಿಗೆ ದೈಹಿಕವಾಗಿ ಹತ್ತಿರವಾಗುತ್ತಾಳೆ. ಈ ಸಮಯದಲ್ಲಿ ಅವನೊಂದಿಗೆ ಭಾವನಾತ್ಮಕವಾಗಿ ಅಂಟಿಕೊಳ್ಳುತ್ತಾಳೆ.
ಸಾಮಾಜಿಕ ಮಾಧ್ಯಮ – ಸಾಮಾಜಿಕ ಮಾಧ್ಯಮಗಳು ಅಪಾರ ಸಂಪರ್ಕಗಳನ್ನು ಸೃಷ್ಟಿಸುವಲ್ಲಿಯೂ ಮುಂದಿವೆ. ಇದಕ್ಕೆ ಕಾರಣ ಹೆಚ್ಚಿನ ಜನರು ಸಾಮಾಜಿಕ ಜಾಲತಾಣಗಳ ಮೂಲಕ ಮತ್ತೆ ತಮ್ಮ ಮಾಜಿ ಪ್ರೇಮಿ ಅಥವಾ ಪ್ರಿಯಕರನ ಸಂಪರ್ಕಕ್ಕೆ ಬರುತ್ತಾರೆ. ತಮ್ಮ ಹಳೆಯ ದಿನಗಳನ್ನು ಪರಸ್ಪರ ಮೆಲುಕು ಹಾಕುತ್ತಾರೆ. ಒಟ್ಟಿಗೆ ಇದ್ದಿದ್ದರೆ ತಮ್ಮ ಜೀವನ ಹೇಗಿರುತ್ತಿತ್ತು ಎಂಬುದನ್ನೆಲ್ಲ ಯೋಚಿಸುತ್ತಾರೆ.
ಪಾರ್ಟಿ – ವಿಚಿತ್ರ ಎನಿಸಿದರೂ ಇದು ಸತ್ಯ, ಅಕ್ರಮ ಸಂಬಂಧಗಳು ಕೌಟುಂಬಿಕ ಕಾರ್ಯಕ್ರಮಗಳ ಸಮಯದಲ್ಲಿ, ಪಾರ್ಟಿಗಳಲ್ಲಿ ಹುಟ್ಟಿಕೊಳ್ಳುತ್ತವೆ. ಪರಿಚಯ ಸ್ನೇಹವಾಗಿ, ಪ್ರೀತಿಗೆ ತಿರುಗಿ ಅಕ್ರಮ ಸಂಬಂಧ ಹುಟ್ಟಿಕೊಳ್ಳುತ್ತದೆ.