
ಈಗ ನಾವೆಲ್ಲರೂ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ವಿವಿಧ ರೀತಿಯ ಅಪ್ಲಿಕೇಷನ್ ಮೂಲಕ ಮೆಸೇಜ್, ಫೋಟೋ, ವಿಡಿಯೋಗಳನ್ನು ಕಳುಹಿಸುತ್ತೇವೆ. ಈಗ ತಂತ್ರಜ್ಞಾನ ಇಷ್ಟೆಲ್ಲ ಮುಂದುವರೆದಿದೆ. ಇಂತಹ ತಂತ್ರಜ್ಞಾನದ ಆರಂಭ ಬಹಳ ವರ್ಷದ ಹಿಂದೆಯೇ ಆಗಿರುತ್ತದೆ. ಹಾಗೆಯೇ ಈ ಎಸ್ ಎಂ ಎಸ್ ಕೂಡ ಬಹಳ ಹಿಂದೆಯೇ ಶುರುವಾಯ್ತು. ಈಗ ನಾವು ದಿನವಿಡೀ ಮೆಸೇಜ್ ಟೈಪ್ ಮಾಡುತ್ತಿದ್ದರೂ ಅದರ ಆರಂಭ ಹೇಗಾಗಿರಬಹುದೆಂದು ವಿಚಾರ ಮಾಡುವುದಿಲ್ಲ. ಅದರ ಬಗ್ಗೆ ತಿಳಿದುಕೊಳ್ಳುವ ಕುತೂಹಲವನ್ನೂ ತೋರಿಸುವುದಿಲ್ಲ. ನಮ್ಮ ನಿತ್ಯ ಜೀವನದಲ್ಲಿ ಹಾಸು ಹೊಕ್ಕಾಗಿರುವ ಈ ಎಸ್ ಎಂ ಎಸ್ ಹೇಗೆ ಬಂತು ಗೊತ್ತಾ?
30 ವರ್ಷದ ಹಿಂದೆ 1992 ಡಿಸೆಂಬರ್ 3 ರಂದು ಮೊಟ್ಟಮೊದಲ ಟೆಕ್ಸ್ಟ್ ಮೆಸೇಜ್ ಕಳುಹಿಸಲಾಗಿತ್ತು. 15 ಅಕ್ಷರವುಳ್ಳ ಈ ಮೆಸೇಜ್ Merry Christmas ಎಂಬುದಾಗಿತ್ತು. ಇದನ್ನು ನೀಲ್ ಪಾಪವರ್ಥ್ ಮುಖಾಂತರ ವೊಡಾಫೋನ್ ನೆಟ್ ವರ್ಕ್ ಸಹಾಯದಿಂದ ಬರೆಯಲಾಗಿತ್ತು. Merry Christmas ಎಂಬ ಮೆಸೇಜ್ ವಡಾಫೋನ್ ಸಿಬ್ಬಂದಿ ರಿಚರ್ಡ್ ಜಾರ್ವಿಸ್ ಅವರಿಗೆ ಸಿಕ್ಕಿತ್ತು.
22 ವರ್ಷದ ಬ್ರಿಟೀಷ್ ಪ್ರೊಗ್ರಾಮರ್ ನೀಲ್ ಪ್ಯಾಪವರ್ತ್ ಅವರು ಕಂಪ್ಯೂಟರ್ ನಿಂದ ಮೊದಲ ಶಾರ್ಟ್ ಮೆಸೇಜ್ ಕಳುಹಿಸಿದ್ದರು. 2017 ರಲ್ಲಿ ನೀಲ್ ಪ್ಯಾಪವರ್ತ್ ಅವರು, “1992 ರಲ್ಲಿ ನನಗೆ ಮುಂದೆ ಈ ಟೆಕ್ಸ್ಟ್ ಮೆಸೇಜ್ ಇಷ್ಟೊಂದು ಜನಪ್ರಿಯವಾಗುತ್ತೆ. ಇದು ಕೋಟ್ಯಾಂತರ ಜನರು ಬಳಸುವ ಇಮೊಜಿ ಮತ್ತು ಮೆಸೇಜಿಂಗ್ ಅಪ್ಲಿಕೇಷನ್ ಗಳ ಹುಟ್ಟಿಗೆ ಕಾರಣವಾಗುತ್ತೆ ಎಂದು ತಿಳಿದಿರಲಿಲ್ಲ” ಎಂದು ಹೇಳುತ್ತಾರೆ.
ಈ ಎಸ್ಎಂಎಸ್ ಈಗ ಎಷ್ಟು ಜನಪ್ರಿಯವಾಗಿದೆ ಎಂದರೆ ಬ್ರಿಟಿಷ್ ಟೆಲಿಕಾಂ ಕಂಪನಿ ವೊಡಾಫೋನ್ ಈ ಮೆಸೇಜ್ ಅನ್ನು NFT ಆಗಿ ಹರಾಜು ಮಾಡಲು ನಿರ್ಧರಿಸಿದೆ. ಈಗ ಇದು ಡಿಜಿಟಲ್ ರಸೀದಿಯಾಗಿದೆ. ಅಷ್ಟೇ ಅಲ್ಲ ಈ ಐಕಾನಿಕ್ ಸಂದೇಶ ಪ್ಯಾರಿಸ್ ನ ಅಗುಟ್ಸ್ ಆಕ್ಷನ್ ಹೌಸ್ ನಲ್ಲಿ ಹರಾಜಾಗಲಿದೆ.