alex Certify ದೇವಸ್ಥಾನದಲ್ಲಿ ಸಿಗುವ ಪ್ರಸಾದದ ಹೂವನ್ನು ಏನು ಮಾಡಬೇಕು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವಸ್ಥಾನದಲ್ಲಿ ಸಿಗುವ ಪ್ರಸಾದದ ಹೂವನ್ನು ಏನು ಮಾಡಬೇಕು ಗೊತ್ತಾ…..?

ದೇವಸ್ಥಾನಗಳಲ್ಲಿ ಪ್ರಸಾದದ ರೂಪದಲ್ಲಿ ಹೂ, ಮಾಲೆಗಳು ಸಿಗೋದು ಸಾಮಾನ್ಯ. ಹೂಗಳನ್ನು ಆಶೀರ್ವಾದದ ರೂಪದಲ್ಲಿ ಪಡೆಯುವ ಭಕ್ತರು ಅದನ್ನು ಮನೆಗೆ ತರ್ತಾರೆ. ಮನೆಗೆ ತಂದ ಪ್ರಸಾದವನ್ನು ಎಲ್ಲಿಡುವುದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಏನಾದ್ರೂ ಅಶುಭ ನಡೆದ್ರೆ ಎಂಬ ಭಯ ಕಾಡುತ್ತದೆ. ಜ್ಯೋತಿಷ್ಯದಲ್ಲಿ ಈ ಹೂವನ್ನು ಏನು ಮಾಡಬೇಕೆಂದು ಹೇಳಲಾಗಿದೆ.

ಪಂಡಿತರ ಪ್ರಕಾರ ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಸಿಕ್ಕ ಹೂವನ್ನು ಮನೆಯಲ್ಲಿ ಕಪಾಟಿನಲ್ಲಿ ಭದ್ರವಾಗಿಡಬಹುದು. ಹಣ, ಆಭರಣವಿಡುವ ಜಾಗದಲ್ಲಿ ಹೂವನ್ನು ಇಡಬಹುದು. ಈ ಹೂವನ್ನು ಬಟ್ಟೆ ಅಥವಾ ಕಾಗದದಲ್ಲಿ ಕಟ್ಟಿಡಬೇಕು.

ಪ್ರಯಾಣದ ವೇಳೆ ಈ ಬಗ್ಗೆ ಹೆಚ್ಚು ಚಿಂತೆ ಕಾಡುತ್ತದೆ. ದೇವಸ್ಥಾನದಲ್ಲಿ ಸಿಕ್ಕ ಹೂ, ಮಾಲೆಯನ್ನು ಹೇಗೆ ಇಟ್ಟುಕೊಳ್ಳಬಹುದು ಎಂಬ ಸಮಸ್ಯೆ ಕಾಡುತ್ತದೆ. ಸಾಮಾನ್ಯವಾಗಿ ಹೂ 2-3 ದಿನಕ್ಕೆ ಸಂಪೂರ್ಣ ಬಾಡಿ ಹೋಗುತ್ತದೆ. ಹೂ ಬಾಡಿದ ಮೇಲೆ ಯಾವುದೇ ಪ್ರಯೋಜನವಿಲ್ಲ. ಒಣಗುವ ಮೊದಲೇ ತನ್ನೆಲ್ಲ ಧನಾತ್ಮಕ ಶಕ್ತಿಯನ್ನು ಹರಡಿರುತ್ತದೆ. ಹಾಗಾಗಿ ಅದನ್ನು ಯಾವುದಾದ್ರೂ ಮರದ ಕೆಳಕೆ ಅಥವಾ ಸರೋವರ, ನದಿಯಲ್ಲಿ ಬಿಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...