ಅಡುಗೆ ಒಂದು ಕಲೆ. ರುಚಿ ರುಚಿ ಆಹಾರವನ್ನು ಪ್ರತಿಯೊಬ್ಬರೂ ತಿನ್ನಲು ಬಯಸ್ತಾರೆ. ಆದ್ರೆ ಪ್ರತಿ ಬಾರಿ ರುಚಿರುಚಿಯಾಗಿ ಆಹಾರ ತಯಾರಾಗುವುದಿಲ್ಲ. ಉಪ್ಪು, ಹುಳಿ, ಖಾರ ಎಲ್ಲವೂ ಸರಿಯಾಗಿರೋದು ಕಷ್ಟ. ಅನೇಕರು ಖಾರ ತಿನ್ನಲು ಇಷ್ಟಪಡುವುದಿಲ್ಲ.
ನೀವು ತಯಾರಿಸಿದ ಆಹಾರದಲ್ಲೂ ಖಾರ ಜಾಸ್ತಿಯಾದ್ರೆ ಕೆಲವೊಂದು ಟಿಪ್ಸ್ ಬಳಸಿ. ಆ ಮೂಲಕ ಖಾರ ಆಹಾರದ ರುಚಿ ಹೆಚ್ಚಿಸಿ.
ತರಕಾರಿ ಸಾಂಬಾರ್ ತಯಾರಿಸಿದ್ದು, ಖಾರ ಹೆಚ್ಚಾಗಿದ್ದರೆ, ಖಾರ ಕಡಿಮೆ ಮಾಡಲು ದೇಸಿ ತುಪ್ಪವನ್ನು ಹಾಕಿ. ಇದು ಖಾರ ಕಡಿಮೆ ಮಾಡಿ ತರಕಾರಿ ರುಚಿಯನ್ನು ಹೆಚ್ಚಿಸುತ್ತದೆ.
ತರಕಾರಿ ಕರ್ರಿಯಲ್ಲಿ ಖಾರ ಹೆಚ್ಚಾದ್ರೆ ಅದಕ್ಕೆ ಟೊಮೋಟೋ ಸೇರಿಸಿ. ಕರಿಗೆ ಟೊಮೋಟೋ ಸೇರಿಸುವ ಮೊದಲು ಪಾತ್ರೆಯಲ್ಲಿ ಎಣ್ಣೆ ಹಾಕಿ ಕತ್ತರಿಸಿದ ಟೊಮೋಟೋವನ್ನು ಚೆನ್ನಾಗಿ ಹುರಿದುಕೊಳ್ಳಿ.
ಕರ್ರಿ ಖಾರ ಕಡಿಮೆ ಮಾಡಿ ರುಚಿ ಹೆಚ್ಚಿಸಬೇಕೆಂದಿರುವವರು ಅದಕ್ಕೆ ತಾಜಾ ಕ್ರೀಂ, ಮೊಸರು ಸೇರಿಸಬಹುದು.
ಆಲೂಗಡ್ಡೆಯನ್ನು ತರಕಾರಿಗಳ ರಾಜಾ ಎನ್ನುತ್ತಾರೆ. ಕರ್ರಿ, ಸಾಂಬಾರ್ ಮಾಡುವ ವೇಳೆ ಖಾರವಾದ್ರೆ ಆಲೂಗಡ್ಡೆಯನ್ನು ಬೇಯಸಿ ಕತ್ತರಿಸಿ ಹಾಕಿದ್ರೆ ಖಾರ ಕಡಿಮೆಯಾಗುತ್ತದೆ.