
ಕಾಲಿನ ಬೆರಳುಗಳು ಎಲ್ಲವೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಒಂದು ಉದ್ದ, ಇನ್ನೊಂದು ಗಿಡ್ಡವಿರುತ್ತದೆ. ಇದಕ್ಕೆ ಹಲವಾರು ಕಾರಣವು ಇದೆ. ಆದರೆ ಹೆಬ್ಬೆರಳಿಗಿಂತ ಎರಡನೇ ಬೆರಳು ಉದ್ದವಿದ್ದರೆ ಇಂತಹವರ ವ್ಯಕ್ತಿತ್ವ ಹೇಗಿರುತ್ತದೆ ಎಂಬುದಕ್ಕೆ ಇಲ್ಲಿದೆ ನೋಡಿ ಮಾಹಿತಿ.
ಕೆಲವು ಹುಡುಗರು ಮದುವೆಯಾಗುವ ತಮ್ಮ ಸಂಗಾತಿಯಾಗುವಳಲ್ಲಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಇನ್ನು ಕೆಲವರು ಅವಳ ಕಣ್ಣು ಹೀಗಿರಬೇಕು, ಬಣ್ಣ ಹೀಗಿರಬೇಕು ಎಂದುಕೊಂಡರೆ ಕೆಲವರು ಅವಳ ಕಾಲಬೆರಳು ಹೀಗಿರಬೇಕು ಹಾಗಿರಬೇಕು ಎಂದುಕೂಡ ಬಯಸುತ್ತಾರೆ.
ಭವಿಷ್ಯದ ಬಗ್ಗೆ ಹೆಚ್ಚು ನಂಬಿಕೆ ಇಟ್ಟುಕೊಂಡವರು ಇದನ್ನು ನಂಬುತ್ತಾರೆ ಕೂಡ. ಕಾಲಿನ ಎರಡನೇ ಬೆರಳು ಉದ್ದವಿರುವ ಹುಡುಗಿಯ ಗುಣಲಕ್ಷಣಗಳು ಇಲ್ಲಿದೆ ನೋಡಿ.
ಹೆಬ್ಬರಳಿನ ಪಕ್ಕದ ಬೆರಳು ಉದ್ದವಾಗಿದ್ದರೆ ಇವರಲ್ಲಿ ನಾಯಕತ್ವದ ಗುಣವಿರುತ್ತದೆ, ತಾವು ಹೇಳಿದಂತೆ ಎಲ್ಲವೂ ಆಗಬೇಕು ಎಂಬ ಮನೋಭಾವ ಇವರಲ್ಲಿ ಹೆಚ್ಚು. ಹಾಗೇ ಇವರು ತುಂಬಾ ಬುದ್ಧಿವಂತರಾಗಿರುತ್ತಾರೆ. ಕಾಲಿನ ಎರಡನೇ ಬೆರಳು ಉದ್ದವಾಗಿರುವ ಹೆಣ್ಣುಮಕ್ಕಳು. ಮನೆಯ ಒಡತಿಯ ಪಟ್ಟವನ್ನು ಬೇಗ ಪಡೆಯುತ್ತಾರಂತೆ. ಹಾಗೇ ಅವರು ತಮ್ಮ ಕುಟುಂಬಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಏನನ್ನಾದರೂ ಸಾಧಿಸುವ ಛಲ ಇವರಲ್ಲಿ ಹೆಚ್ಚಿರುತ್ತದೆಯಂತೆ.
ಇನ್ನು ಇದೇ ಬೆರಳು ಚಿಕ್ಕದ್ದಾಗಿದ್ದರೆ ಅಂತಹ ಹುಡುಗಿಯರಲ್ಲಿ ಹೊಂದಾಣಿಕೆಯ ಸ್ವಭಾವ ಹೆಚ್ಚಿರುತ್ತದೆಯಂತೆ. ಎಂತಹ ಪರಿಸ್ಥಿತಿ ಬಂದರೂ ಅವರಲ್ಲಿನ ಹೊಂದಾಣಿಕೆಯ ಗುಣದಿಂದ ಅದನ್ನು ನಿಭಾಯಿಸಿಕೊಂಡು ಹೋಗುತ್ತಾರಂತೆ.