ಕೆಲವೊಮ್ಮೆ ಬಟ್ಟೆಗಳನ್ನು ಹೇಗೆ ಅರೆಂಜ್ ಮಾಡುವುದು ಅನ್ನೋದೇ ಗೊತ್ತಾಗುವುದಿಲ್ಲ. ಅರ್ಜೆಂಟ್ ಆದಾಗ ಬೇಕಾಗಿದ್ದು ಕೈಗೆ ಸಿಗುವುದೇ ಇಲ್ಲ. ಹುಡುಕುವುದರಲ್ಲಿಯೇ ಬಹುತೇಕ ಮಂದಿ ಟೈಂ ವೇಸ್ಟ್ ಮಾಡಿಕೊಳ್ಳುತ್ತಾರೆ.
ಬದಲಿಗೆ ವಾರ್ಡ್ ರೋಬ್ ಅನ್ನು ಸರಿಯಾದ ರೀತಿಯಲ್ಲಿ ಮೇಂಟೇನ್ ಮಾಡಿದರೆ ಯಾವ ಗೊಂದಲವೂ ಆಗುವುದಿಲ್ಲ. ಇಲ್ಲಿವೆ ಪರ್ಫೆಕ್ಟ್ ವಾರ್ಡ್ ರೋಬ್ ನ ಒಂದಷ್ಟು ಟಿಪ್ಸ್.
* ವಾರ್ಡ್ ರೋಬ್ ನಲ್ಲಿ ಬಟ್ಟೆಗಳನ್ನು ಜೋಡಿಸಿಡುವ ಮೊದಲು ಕೆಳಗೆ ಪೇಪರ್ ಅಥವಾ ಸಿಲಿಕಾನ್ ಮ್ಯಾಟ್ ಹಾಕಿ.
* ಒಣಗಿದ ಬಟ್ಟೆಗಳನ್ನು ಐರನ್ ಮಾಡಿ ಚೆನ್ನಾಗಿ ಜೋಡಿಸಿ.
* ಡಿಸೈನರ್ ಡ್ರೆಸ್ ಅಥವಾ ಸೀರೆಯನ್ನು ಪ್ಲಾಸ್ಟಿಕ್ ಬ್ಯಾಗ್ ನಲ್ಲಿಡಿ. ಹೀಗೆ ಮಾಡಿದರೆ ಬಟ್ಟೆ ಫ್ರೆಶ್ ಆಗಿರುತ್ತದೆ. ಅಲ್ಲದೆ ಇವುಗಳನ್ನು ಪದೇ ಪದೇ ಐರನ್ ಮಾಡಬೇಕಾಗಿಲ್ಲ.
* ಅಲ್ಮೆರಾವನ್ನು ಅಗಾಗ ತೆರೆದಿಡಿ. ಇದರಿಂದ ಗಾಳಿ ಸರಿಯಾಗಿ ಹರಡುತ್ತದೆ. ಇದರಿಂದ ಬ್ಯಾಡ್ ಸ್ಮೆಲ್ ಬರೋದಿಲ್ಲ.
* ವಾರ್ಡ್ ರೋಬ್ ನಲ್ಲಿ ನ್ಯಾಫ್ತಾಲಿನ್ ಬಾಲ್ ಗಳನ್ನಿಡಿ. ಇದರಿಂದ ಬಟ್ಟೆಗಳು ಫ್ರೆಶ್ ಆಗಿರುತ್ತವೆ.
* ಮಳೆಗಾಲದಲ್ಲಿ ಬಟ್ಟೆಗಳಿಗೆ ಫಂಗಸ್ ಹಿಡಿಯುತ್ತದೆ. ಇದಕ್ಕೆ ಆ್ಯಂಟಿ ಫಂಗಸ್ ಮಾತ್ರೆಗಳನ್ನು ಇಡುವುದು ಒಳಿತು.
* ಹ್ಯಾಂಗರ್ ಬಳಸಿದಲ್ಲಿ ಹೆಚ್ಚು ಜಾಗ ಉಳಿಯುತ್ತದೆ. ಅಲ್ಲದೆ ಐರನ್ ಮಾಡದ ಬಟ್ಟೆಗಳನ್ನು ಬೇರೆ ಇಡಿ.
* ಅಲ್ಮೆರಾದಲ್ಲಿ ಬ್ಯೂಟಿ ಉತ್ಪನ್ನಗಳನ್ನು ಇಡುವುದಾದರೆ ಬೇರೆ ಜಾಗ ಮಾಡಿ. ಅಥವಾ ಒಂದು ಬಾಕ್ಸ್ ಅಥವಾ ಬ್ಯಾಸ್ಕೆಟ್‌ನಲ್ಲಿ ಹಾಕಿಡಿ.
* ಸ್ಲಿಪ್ಪರ್ ಅನ್ನು ಶೂ ಸ್ಟ್ಯಾಂಡ್‌ನಲ್ಲಿ ನೀಟಾಗಿ ಜೋಡಿಸಿಡಿ. ಕ್ರಮವಾಗಿ ಜೋಡಿಸಿಟ್ಟರೆ ಸುಲಭವಾಗಿ ಕೈಗೆ ಸಿಗುತ್ತೆ.