ಪ್ರತಿ ದಿನ ಸ್ನಾನ ಮಾಡದೆ ಹೋದ್ರೆ ಮನಸ್ಸಿಗೆ ಸಮಾಧಾನ ಇರೋದಿಲ್ಲ. ಕೆಲವರು ದಿನಕ್ಕೆ ಎರಡು ಬಾರಿ ಸ್ನಾನ ಮಾಡ್ತಾರೆ. ಪ್ರತಿ ದಿನ ಸ್ನಾನ ಮಾಡಿದ್ರೆ ಮನಸ್ಸು ಉಲ್ಲಾಸಿತಗೊಳ್ಳುವ ಜೊತೆಗೆ ಯಾವುದೇ ಸೋಂಕು ದೇಹವನ್ನು ಅಂಟಿಕೊಳ್ಳುವುದಿಲ್ಲ. ರೋಗ ನಮ್ಮತ್ತ ಸುಳಿಯುವುದಿಲ್ಲ ಎನ್ನುತ್ತಾರೆ ಭಾರತೀಯರು.
ವಿಜ್ಞಾನಿಗಳು ಪ್ರತಿನಿತ್ಯದ ಸ್ನಾನದ ಬಗ್ಗೆ ಬೇರೆಯದೇ ವ್ಯಾಖ್ಯಾನ ನೀಡ್ತಾರೆ. ಅವ್ರ ಪ್ರಕಾರ ಪ್ರತಿ ದಿನ ಸ್ನಾನ ಮಾಡಬಾರದಂತೆ. ಪ್ರತಿ ದಿನ ಸ್ನಾನ ಮಾಡಿದ್ರೆ ಆರೋಗ್ಯ ಹದಗೆಡುತ್ತದೆಯಂತೆ. ಸ್ನಾನ ಮಾಡಿದ್ರೆ ದೇಹಕ್ಕೆ ಅವಶ್ಯವಿರುವ ತೈಲದ ಅಂಶ ಕಡಿಮೆಯಾಗುತ್ತದೆಯಂತೆ. ಇದ್ರಿಂದ ಚರ್ಮಕ್ಕೆ ತೊಂದರೆ ಆಗುವ ಸಾಧ್ಯತೆ ಹೆಚ್ಚಂತೆ.