ದೇವರು ಮತ್ತು ದೇವತೆಗಳ ಚಿತ್ರವನ್ನು ಮನೆಯಲ್ಲಿಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಅಲ್ಲದೇ ಇದೀಗ ಕಾರ್ತಿಕ ಮಾಸ ನಡೆಯುತ್ತಿರುವುದರಿಂದ ಮನೆಯಲ್ಲಿ ಶಿವನ ಫೋಟೊಗಳನ್ನು ಇಟ್ಟರೆ ತುಂಬಾ ಒಳ್ಳೆಯದು. ಹಾಗಾದ್ರೆ ಶಿವನ ಯಾವ ಫೋಟೊವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.
ಉತ್ತರ ದಿಕ್ಕು ಶಿವನ ನೆಚ್ಚಿನ ದಿಕ್ಕು. ಮತ್ತು ಈ ದಿಕ್ಕಿನಲ್ಲಿ ಶಿವನ ವಾಸ ಸ್ಥಾನವಿದೆ ಅಂದರೆ ಕೈಲಾಸ ಪರ್ವತ. ಹಾಗಾಗಿ ಶಿವನ ಚಿತ್ರವನ್ನು ಹಾಕಲು ಉತ್ತರ ದಿಕ್ಕನ್ನು ಆರಿಸಿಕೊಳ್ಳಬೇಕು. ಈ ದಿಕ್ಕಿನಲ್ಲಿ ಶಿವನ ಚಿತ್ರವನ್ನು ಹಾಕುವುದರಿಂದ ಶುಭ ಫಲಿತಾಂಶ ಸಿಗುತ್ತದೆ.
ಹಾಗೇ ಶಿವನು ಶಾಂತ ಮತ್ತು ಧ್ಯಾನಸ್ಥ ಭಂಗಿಯಲ್ಲಿರುವ ಅಥವಾ ನಂದಿಯ ಮೇಲೆ ಕುಳಿತಿರುವ ಅಥವಾ ಶಿವ ತನ್ನ ಇಡೀ ಕುಟುಂಬದವರೊಂದಿಗೆ ಇರುವ ಫೋಟೊವನ್ನು ಮನೆಯಲ್ಲಿ ಹಾಕಿ. ಆದರೆ ಶಿವನು ಕೋಪಗೊಂಡಿರುವಂತಹ ಫೋಟೊಗಳನ್ನು ಹಾಕಬೇಡಿ. ಇದರಿಂದ ಮನೆಯ ಸಂತೋಷ ಮತ್ತು ಶಾಂತಿಗೆ ಭಂಗವಾಗುತ್ತದೆ.