ಮನುಷ್ಯರಿಗೆ ಆಹಾರ ಪದ್ಧತಿ ಇರುವಂತೆಯೇ ಪ್ರಾಣಿಗಳಿಗೂ ಇರುತ್ತದೆ. ಕೆಲವು ಆಹಾರಗಳನ್ನು ತಿಂದರೆ ಪ್ರಾಣಿಗಳಿಗೆ ಆಗಿಬರುವುದಿಲ್ಲ. ಹಾಗಾಗಿ ನೀವು ಸಾಕುವ ನಾಯಿಗಳಿಗೆ ಯಾವ ಬಗೆಯ ಆಹಾರ ಕೊಡಬೇಕು ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಕೆಲವು ಸಂದರ್ಭಗಳಲ್ಲಿ ಮನುಷ್ಯರು ತಿನ್ನುವ ಆಹಾರ ಪದಾರ್ಥಗಳು ಕೂಡ ನಾಯಿಗೆ ಆಗಿಬರಲ್ಲ. ಕೆಲವು ಆಹಾರಗಳು ಅಜೀರ್ಣಕ್ಕೆ ಕಾರಣವಾದರೆ ಮತ್ತೇ ಕೆಲವು ತೀವ್ರವಾದ ಅನಾರೋಗ್ಯಕ್ಕೂ ಕಾರಣವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆಲ್ಕೋಹಾಲ್ ಪದಾರ್ಥಗಳನ್ನು ಕೊಡುವುದರಿಂದ ಅಮಲು ಹೆಚ್ಚಿ ಕೋಮಾ ಸ್ಥಿತಿ ತಲುಪಿ ನಾಯಿ ಜೀವಕ್ಕೆ ಅಪಾಯವಾಗಬಹುದು. ಬೆಣ್ಣೆಹಣ್ಣು ನಾಯಿಗಳಿಗೆ ವಾಂತಿ ಮತ್ತು ಅತಿಸಾರಕ್ಕೆ ಕಾರಣವಾಗುತ್ತವೆ ಎನ್ನಲಾಗಿದೆ.
ಸಿಟ್ರಸ್ ಉತ್ಪನ್ನಗಳಿಂದ ನಾಯಿಗೆ ವಾಂತಿ ಬರುವ ಸಾಧ್ಯತೆ ಇರುತ್ತದೆ. ಮೀನು, ಮಾಂಸ ಮೊದಲಾದವುಗಳ ಮೂಳೆಯಿಂದಲೂ ಜೀರ್ಣಕ್ರಿಯೆಯಲ್ಲಿ ತೊಂದರೆಯಾಗುತ್ತದೆ. ಹಸಿಮಾಂಸದಿಂದ ಅಡ್ಡ ಪರಿಣಾಮ ಉಂಟಾಗುತ್ತದೆ. ಕೊಳೆತ ಆಹಾರ ಪದಾರ್ಥಗಳನ್ನು ನಾಯಿಗಳಿಗೆ ಕೊಡುವುದು ಒಳ್ಳೆಯದಲ್ಲ ಎನ್ನುತ್ತಾರೆ ತಿಳಿದವರು. ಏನೇ ತೊಂದರೆ ಕಂಡುಬಂದಲ್ಲಿ ವೈದ್ಯರ ಸಲಹೆ ಪಡೆಯುವುದೊಳಿತು.