ಮಗು ಹುಟ್ಟಿದೊಡನೆ ಯಾರ ಹಾಗಿದೆ ಅನ್ನೋದು ದೊಡ್ಡ ಕುತೂಹಲ. ಅಪ್ಪ, ಅಮ್ಮ, ಅಜ್ಜ, ಅಜ್ಜಿ ಹೀಗೆ ಕುಟುಂಬದವರೆಲ್ಲ ತನ್ನ ಹಾಗಿದೆಯಾ ಅಂತಾ ಹೋಲಿಕೆ ಮಾಡಿಕೊಳ್ಳುತ್ತಾರೆ.
ಆದ್ರೆ ಇಲ್ಲೊಂದು ಇಂಟೆರೆಸ್ಟಿಂಗ್ ವಿಷಯವಿದೆ. ಮಗು ಅಪ್ಪನಂತಿದ್ದರೆ ಅದು ಇನ್ನಷ್ಟು ಆರೋಗ್ಯವಂತವಾಗಿರುತ್ತೆ ಅನ್ನೋದು ಸಂಶೋಧನೆಯಿಂದ ತಿಳಿದುಬಂದಿದೆ.
ಹೌದು….ಹುಟ್ಟಿದ ಮಗು ನೋಡೋದಿಕ್ಕೆ ಅಪ್ಪನ ಹಾಗಿದ್ದರೆ ಆ ತಂದೆಗೂ ಖುಷಿ. ಅಲ್ಲದೇ ಅಂಥ ಮಗು ಒಂದು ವರ್ಷದವರೆಗೆ ತಂದೆಯೊಂದಿಗೆ ಹೆಚ್ಚಿನ ಸಮಯ ಕಳೆಯುತ್ತದೆ. ಅಲ್ಲದೇ ತಂದೆಯೂ ಸಹ ತನ್ನ ಹೋಲಿಕೆ ಇರುವ ಮಗುವಿನೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಇದರಿಂದ ಮಗು ಹೆಚ್ಚು ಆರೋಗ್ಯವಂತವಾಗಿರುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.