ಮನೆಯ ಸ್ವಚ್ಛತೆಗೂ ಲಕ್ಷ್ಮಿಗೂ ಸಂಬಂಧವಿದೆ. ಸ್ವಚ್ಛವಾಗಿರುವ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆಂಬ ನಂಬಿಕೆಯಿದೆ. ಮನೆ ಸ್ವಚ್ಛ ಮಾಡುವ ಪೊರಕೆಗೆ ದೇವಿ ಸ್ಥಾನವನ್ನು ನೀಡಲಾಗಿದೆ. ಮನೆಯಲ್ಲಿ ಪೊರಕೆ ಹೇಗಿಡಬೇಕು ಎನ್ನುವುದ್ರಿಂದ ಹಿಡಿದು ಪೊರಕೆಯನ್ನು ಹೇಗೆ ಬಳಕೆ ಮಾಡಬೇಕೆನ್ನುವವರೆಗೆ ಅನೇಕ ವಿಷಯಗಳನ್ನು ವೈದಿಕ ಧರ್ಮದಲ್ಲಿ ವಿವರವಾಗಿ ಹೇಳಲಾಗಿದೆ.
ಬೆಳಿಗ್ಗೆ ಸೂರ್ಯೋದಯಕ್ಕಿಂತ ಮೊದಲು ಮನೆಯನ್ನು ಸ್ವಚ್ಛಗೊಳಿಸುವುದು ಉತ್ತಮ. ಸೂರ್ಯಾಸ್ತದ ನಂತ್ರ ಪೊರಕೆ ಹಿಡಿಯಬಾರದು. ಕಾಲಿನಿಂದ ಪೊರಕೆಯನ್ನು ಒದೆಯಬಾರದು. ಹಾಗೆ ಎಂದೂ ಪೊರಕೆಯನ್ನು ನಿಲ್ಲಿಸಿಡಬಾರದು. ಪೊರಕೆಯನ್ನು ಸಾರ್ವಜನಿಕ ಸ್ಥಳದಲ್ಲಿ ಅದ್ರಲ್ಲೂ ಬಂದು ಹೋಗುವವರ ಕಣ್ಣಿಗೆ ಕಾಣುವಂತೆ ಪೊರಕೆ ಇಡಬಾರದು. ಹೀಗೆ ಪೊರಕೆ ಬಗ್ಗೆ ಧರ್ಮದಲ್ಲಿ ಅನೇಕ ಸಂಗತಿಗಳನ್ನು ಹೇಳಲಾಗಿದೆ.
ಪೊರಕೆ ಬಗ್ಗೆ ಇನ್ನೊಂದು ನಂಬಿಕೆಯಿದೆ. ಆಟವಾಡ್ತಿರುವ ಮಕ್ಕಳು ತಮ್ಮ ಆಟದ ಸಾಮಗ್ರಿ ಬಿಟ್ಟು ಪೊರಕೆ ಹಿಡಿದಲ್ಲಿ ಅದಕ್ಕೊಂದು ವಿಶೇಷ ಅರ್ಥವಿದೆ. ಕೆಲವೊಮ್ಮೆ ಮನೆಯವರನ್ನು ಅನುಕರಿಸುವ ಮಕ್ಕಳು ಪೊರಕೆ ಹಿಡಿದು ಮನೆ ಸ್ವಚ್ಛತೆಗೆ ಮುಂದಾಗ್ತಾರೆ. ಇದು ಮನೆಗೆ ಅತಿಥಿಗಳು ಬರುತ್ತಾರೆನ್ನುವ ಸಂಕೇತ.
ಈ ವೇಳೆ ಮನೆಗೆ ಬರುವ ಅತಿಥಿಗಳಿಂದ ಆರ್ಥಿಕ ಲಾಭವಾಗಲಿದೆ ಇಲ್ಲವೆ ಬೇರೆ ಯಾವುದೋ ಮೂಲದಿಂದ ಮನೆಗೆ ಹಣ ಹರಿದು ಬರಲಿದೆ ಎಂಬ ಸಂಕೇತವನ್ನು ಮಕ್ಕಳು ನೀಡುತ್ತಾರೆಂದು ನಂಬಲಾಗಿದೆ.