ಸಲಾಡ್ ತಿನ್ನಲು ಪ್ರತಿಯೊಬ್ಬರೂ ಇಷ್ಟಪಡ್ತಾರೆ. ಆದ್ರೆ ಯಾವ ಸಮಯದಲ್ಲಿ ಸಲಾಡ್ ತಿನ್ನಬೇಕು ಎಂಬುದು ಅನೇಕರಿಗೆ ತಿಳಿದಿಲ್ಲ. ಕೆಲವರು ರಾತ್ರಿ ಸಲಾಡ್ ಸೇವನೆ ಮಾಡ್ತಾರೆ. ರಾತ್ರಿ ಸಲಾಡ್ ಸೇವನೆ ಮಾಡುವುದ್ರಿಂದ ಆರೋಗ್ಯಕ್ಕೆ ಒಳ್ಳೆಯದಾಗುವ ಬದಲು ನಷ್ಟವಾಗುತ್ತದೆ.
ಸಲಾಡ್ ನಲ್ಲಿ ಅನೇಕ ಪೋಷಕಾಂಶವಿದೆ. ದೇಹದಲ್ಲಿ ಜೀವಸತ್ವಗಳು ಮತ್ತು ಖನಿಜಗಳ ಕೊರತೆಯನ್ನು ಇದು ಕಡಿಮೆ ಮಾಡುತ್ತದೆ. ದೇಹದಲ್ಲಿ ನಾರಿನ ಕೊರತೆಯಿರುವವರು ಸಲಾಡ್ ಸೇವನೆ ಮಾಡಬೇಕು.ಆದ್ರೆ ಸಲಾಡ್ ಸೇವನೆ ಮಾಡುವ ಮೊದಲು ಅದ್ರ ಬಗ್ಗೆ ಕೆಲವೊಂದು ಸಂಗತಿ ತಿಳಿದಿರಬೇಕು.
ಮೊದಲನೆಯದಾಗಿ, ಮಳೆಗಾಲದಲ್ಲಿ ಸಲಾಡ್ ತಿನ್ನುವಾಗ ಎಚ್ಚರಿಕೆ ವಹಿಸಬೇಕು. ಅಜಾಗರೂಕತೆ ಸಮಸ್ಯೆಗೆ ಕಾರಣವಾಗುತ್ತದೆ. ಬಹಳ ಹಿಂದೆಯೇ ಕತ್ತರಿಸಿದ ತರಕಾರಿಯನ್ನು ಸಲಾಡ್ ಮಾಡಿ ತಿನ್ನಬೇಡಿ. ಮಳೆಗಾಲದಲ್ಲಿ ಈ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು.
ರಾತ್ರಿಯಲ್ಲಿ ಸಲಾಡ್ ತಿನ್ನಬೇಡಿ. ಅದ್ರಲ್ಲೂ ಸೌತೆ ಕಾಯಿಯನ್ನು ತಿನ್ನಲೇಬೇಡಿ. ಆಹಾರದೊಂದಿಗೆ ಸಲಾಡ್ ತಿನ್ನಲು ಆಹಾರ ತಜ್ಞರು ಎಂದೂ ಸಲಹೆ ನೀಡುವುದಿಲ್ಲ. ಊಟಕ್ಕೆ ಅರ್ಧ ಅಥವಾ ಒಂದು ಗಂಟೆ ಮೊದಲು ಸಲಾಡ್ ತಿನ್ನುವುದು ಪ್ರಯೋಜನಕಾರಿ.
ಸಲಾಡ್‌ಗೆ ಉಪ್ಪು ಸೇರಿಸದಂತೆ ತಜ್ಞರು ಸಲಹೆ ನೀಡುತ್ತಾರೆ. ಸಲಾಡ್‌ಗೆ ಉಪ್ಪು ಸೇರಿಸುತ್ತಿದ್ದರೆ, ಕಪ್ಪು ಉಪ್ಪು ಅಥವಾ ಕಲ್ಲಿನ ಉಪ್ಪನ್ನು ಬಳಸಿ.