ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಪ್ರೋಟೀನ್ ಸಮೃದ್ದವಾಗಿದೆ. ಇದು ಮೂಳೆಗಳು ಮತ್ತು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಾಗಾಗಿ ಗರ್ಭಿಣಿಯರಿಗೆ ಪ್ರತಿದಿನ ಮೊಟ್ಟೆ ಸೇವಿಸಲು ಹೇಳುತ್ತಾರೆ. ಆದರೆ ಗರ್ಭಾವಸ್ಥೇಯಲ್ಲಿ ಮಹಿಳೆಯರು ಹೆಚ್ಚು ಮೊಟ್ಟೆಯನ್ನು ಸೇವಿಸಬಾರದಂತೆ. ಇದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆಯಂತೆ.
ಗರ್ಭಿಣಿಯರು ಮೊದಲ ಮತ್ತು ಎರಡನೇ ತಿಂಗಳಿನಲ್ಲಿ ದಿನಕ್ಕೆ 1-2 ಮೊಟ್ಟೆಗಳನ್ನು ಸೇವಿಸಬಹುದಂತೆ. ಮೂರನೇ ತಿಂಗಳಿನ ನಂತರ 2-3 ಮೊಟ್ಟೆ ಸೇವಿಸಬಹುದಂತೆ. ಆದರೆ ಮೊಟ್ಟೆಗಳನ್ನು ಅತಿಯಾಗಿ ತಿಂದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತದೆಯಂತೆ. ಇದರಿಂದ ವಾಕರಿಕೆ, ವಾಂತಿ ಮತ್ತು ಅತಿಸಾರದಂತಹ ಸಮಸ್ಯೆಗಳು ಕಾಡುತ್ತದೆಯಂತೆ.
ಅಲ್ಲದೇ ಇದರಲ್ಲಿ ಕೊಬ್ಬಿನಾಂಶ ಹೆಚ್ಚಾಗಿರುವ ಕಾರಣ ಇದು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆ ಕಾಡುತ್ತದೆ ಮತ್ತು ತೂಕ ಹೆಚ್ಚಾಗಬಹುದು.
ಹಾಗಾಗಿ ಮಹಿಳೆಯರು ಗರ್ಭಾವಸ್ಥೆಯಲ್ಲಿ ಮೊಟ್ಟೆಗಳನ್ನು ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯಿರಿ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಕುದಿಸಿ ಸೇವಿಸಿ.