ಪದೇ ಪದೇ ನೀರು ಕುಡಿಯುತ್ತಿರುವುದರಿಂದ, ಜ್ಯೂಸ್ ಸೇವಿಸಿದ ಬಳಿಕ ಹೆಚ್ಚು ಬಾರಿ ಮೂತ್ರ ವಿಸರ್ಜನೆಗೆ ಹೋಗಬೇಕು ಎಂದೆನಿಸುವುದು ಸಹಜ. ಹಾಗಾದಾಗ ಹೋಗದೆ, ಕಟ್ಟಿ ಕುಳಿತುಕೊಂಡರೆ ಅದರಿಂದ ಸಮಸ್ಯೆಗಳೇ ಹೆಚ್ಚಬಹುದು.
ಮನುಷ್ಯನ ಮೂತ್ರಕೋಶದಲ್ಲಿ ಎರಡು ಕಪ್ ನಷ್ಟು ನೀರನ್ನು ಹಿಡಿದುಕೊಳ್ಳುವಷ್ಟು ಮಾತ್ರ ಜಾಗವಿದೆ. ಇದು ತುಂಬಿದಾಗ ಮೆದುಳಿಗೆ ಸಂಕೇತ ರವಾನೆಯಾಗುತ್ತದೆ. ಹೆಚ್ಚು ಮೂತ್ರ ಹಿಡಿದಿಟ್ಟುಕೊಂಡರೆ ಬ್ಲಾಡರ್ ಹೆಚ್ಚು ವಿಸ್ತಾರವಾಗಿ ಇತರ ಭಾಗಗಳಿಗೆ ಹಾನಿಯುಂಟಾಗಬಹುದು, ಇದರಿಂದ ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಾವು.
ದಿನಕ್ಕೆ 4 ಲೀಟರ್ ನೀರು ಕುಡಿಯುವ ವ್ಯಕ್ತಿ ಎರಡರಿಂದ ಮೂರು ಗಂಟೆಗೊಮ್ಮೆ ಕಡ್ಡಾಯವಾಗಿ ಮೂತ್ರ ವಿಸರ್ಜನೆ ಮಾಡಲೇಬೇಕು. ಇಲ್ಲವಾದರೆ ಕ್ರಮೇಣ ಬ್ಲಾಡರ್ ಸೂಕ್ಷ್ಮತೆ ಕಳೆದುಕೊಂಡು ಮೂತ್ರ ಸೋರಿಕೆಗೆ ಕಾರಣವಾಗಬಹುದು. ಕೆಮ್ಮು ಅಥವಾ ಸೀನುವಾಗ ಮೂತ್ರ ವಿಸರ್ಜನೆಯಾಗಬಹುದು.
ಹೀಗೆ ಮೂತ್ರ ವಿಸರ್ಜಿಸುವಾಗ ಸಮಸ್ಯೆಗಳಾದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಮೂತ್ರ ಬಂದಾಕ್ಷಣ ಟಾಯ್ಲೆಟ್ಗೆ ಹೋಗಿ ಬ್ಲಾಡರ್ ಖಾಲಿ ಮಾಡಿಕೊಳ್ಳುವುದೇ ಇದಕ್ಕೆ ಅತ್ಯುತ್ತಮ ಪರಿಹಾರ.