alex Certify ಪ್ರತಿದಿನ ಫ್ರಿಡ್ಜ್ ವಾಟರ್ ಕುಡಿಯುವುದರಿಂದ ಏನಾಗುತ್ತೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ ಫ್ರಿಡ್ಜ್ ವಾಟರ್ ಕುಡಿಯುವುದರಿಂದ ಏನಾಗುತ್ತೆ ಗೊತ್ತಾ…?

ಬೇಸಿಗೆಯಲ್ಲಿ ಹೆಚ್ಚು ತಣ್ಣನೆಯ ನೀರು ಸೇವಿಸಲು ಇಚ್ಛಿಸುತ್ತೇವೆ. ಆದರೆ ತಣ್ಣನೆಯ ನೀರು ಕುಡಿಯುವುದು ತಪ್ಪಲ್ಲ. ಆದರೆ ಫ್ರಿಜ್ ನಲ್ಲಿಟ್ಟಿರುವ ನೀರು ಕುಡಿಯುವುದು ತಪ್ಪು. ಇದು ನಮ್ಮ ದೇಹದ ಆರೋಗ್ಯಕ್ಕೆ ಅಷ್ಟಾಗಿ ಒಳ್ಳೆಯದಲ್ಲ. ಬಿಸಿಲ ಧಗೆಗೆ ತಣ್ಣನೆಯ ನೀರು ಹಿತವೆನಿಸಬಹುದು. ಆದ್ರೆ ಫ್ರಿಜ್ ನಲ್ಲಿಟ್ಟ ನೀರು ಆರೋಗ್ಯಕ್ಕೆ ಹಾನಿಕರ.

* ಆಹಾರ ಸೇವಿಸಿದ ತಕ್ಷಣ ಕುಡಿಯುವ ತಣ್ಣನೆಯ ನೀರು ಜೀರ್ಣಕ್ರಿಯೆಗೆ ಅಡ್ಡಿಯುಂಟು ಮಾಡುತ್ತದೆ. ಇದರಿಂದ ಚಯಾಪಚಯ ಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

* ಸದಾ ಕೋಲ್ಡ್ ವಾಟರ್ ಕುಡಿಯುವುದರಿಂದ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ.

* ತಣ್ಣನೆಯ ನೀರು ಕುಡಿಯುವುದರಿಂದ ಮಲಬದ್ಧತೆ ಹಾಗೂ ಗ್ಯಾಸ್ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದರಿಂದಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ.

* ಹೃದಯದ ವೇಗಸ್ ನರದ ಮೇಲೆ ತಣ್ಣನೆಯ ನೀರು ಪರಿಣಾಮ ಬೀರುತ್ತದೆ. ಇದರಿಂದಾಗಿ ಹೃದಯ ಬಡಿತದ ವೇಗ ಕಡಿಮೆಯಾಗುತ್ತದೆ. ಇದು ಹೃದಯಾಘಾತದ ಅಪಾಯಕ್ಕೆ ದಾರಿ ಮಾಡಿ ಕೊಡುತ್ತದೆ.

* ತಣ್ಣನೆಯ ನೀರು ಕುಡಿಯುವುದರಿಂದ ವಸಡಿನ ನೋವು ಪ್ರಾರಂಭವಾಗುತ್ತದೆ. ಹಲ್ಲುಗಳು ಸಡಿಲವಾಗುವ ಸಾಧ್ಯತೆ ಹೆಚ್ಚಿರುತ್ತದೆ.

* ತಣ್ಣನೆಯ ನೀರು ಕುಡಿಯುವುದರಿಂದ ಗಂಟಲಿನ ರಕ್ಷಣಾತ್ಮಕ ಪದರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಇದರಿಂದಾಗಿ ಗಂಟಲಿನ ಸೋಂಕು ಕಾಣಿಸಿಕೊಳ್ಳುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...