ರಾತ್ರಿ ಹಾಸಿಗೆಯಲ್ಲಿ ಮಲಗಿದ ತಕ್ಷಣ ಒಂದಲ್ಲ ಒಂದು ವಿಚಾರ ತಲೆಯಲ್ಲಿ ಬಂದೇ ಬರುತ್ತೆ. ಇಂದು ಹೇಗೆ ದಿನ ಕಳೆಯಿತು. ಯಾರಿಂದ ನೋವಾಯ್ತು, ನನಗೆ ಯಾಕೆ ಹೀಗಾಗುತ್ತೆ? ಹೀಗೆ ಯಾವುದಾದ್ರೂ ಒಂದು ವಿಚಾರದ ಬಗ್ಗೆ ಮನಸ್ಸು ಚಿಂತಿಸುತ್ತದೆ. ಹುಡುಗಿಯರು ನಿದ್ದೆ ಬರುವ ಮುನ್ನ ಏನು ಯೋಚನೆ ಮಾಡ್ತಾರೆ ಗೊತ್ತಾ?
ಪ್ರತಿಯೊಬ್ಬ ಹುಡುಗಿ ರಾತ್ರಿ ನಿದ್ದೆ ಮಾಡುವ ಮುನ್ನ ತನ್ನ ಭವಿಷ್ಯದ ಬಗ್ಗೆ ಯೋಚನೆ ಮಾಡ್ತಾಳೆ. ನನ್ನ ಮುಂದಿನ ಭವಿಷ್ಯ ಹೇಗಿರುತ್ತೆ? ಅದು ಚೆನ್ನಾಗಿರಲು ಏನು ಮಾಡಬೇಕು? ಎನ್ನುವ ಬಗ್ಗೆ ಹುಡುಗಿ ಯೋಚನೆ ಮಾಡ್ತಾಳೆ.
ಈ ದಿನಗಳಲ್ಲಿ ಬಹಳ ದೊಡ್ಡ ಸಂಗತಿಗಳಲ್ಲಿ ಸಂಗಾತಿ ವಿಚಾರವೂ ಒಂದು. ಬಾಯ್ ಫ್ರೆಂಡ್ ಹೊಂದಿರುವ ಹುಡುಗಿಯರು ಅವರ ಬಗ್ಗೆ ಯೋಚನೆ ಮಾಡಿದ್ರೆ, ಬಾಯ್ ಫ್ರೆಂಡ್ ಇಲ್ಲದ ಹುಡುಗಿಯರು ಎಂತ ಹುಡುಗ ನನಗೆ ಸಿಗಬಹುದು ಅಂತಾ ಯೋಚಿಸ್ತಾರೆ.
ಮಲಗುವ ಮುನ್ನವೇ ಹುಡುಗಿಯರಿಗೆ ಏಳುವ ಟೆನ್ಷನ್ ಇರುತ್ತೆ. ಹಾಗಾಗಿ ತನ್ನ ಮೊಬೈಲ್ ನಲ್ಲಿ ಅಲಾರಾಂ ಇಟ್ಟು ಮಲಗ್ತಾಳೆ ಹುಡುಗಿ. ಜೊತೆಗೆ ಬೆಳಿಗ್ಗೆ ಏನು ತಿನ್ನಬೇಕು, ಯಾವ ಬಟ್ಟೆ ಧರಿಸಬೇಕು ಎನ್ನುವುದನ್ನೂ ಯೋಚಿಸ್ತಾಳೆ.
ದಿನದಲ್ಲಿ ನಡೆದ ಘಟನೆಗಳ ಬಗ್ಗೆಯೂ ಹುಡುಗಿ ಮೆಲಕು ಹಾಕ್ತಾಳೆ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ವಿಶ್ಲೇಷಣೆ ಮಾಡ್ತಾಳೆ.
ಕಚೇರಿ ಹಾಗೂ ಕಾಲೇಜಿಗೆ ಹೋಗುವ ಹುಡುಗಿಯರು, ಹುಡುಗರು ಜಾಸ್ತಿ ಇಷ್ಟಪಡುವ ತಮ್ಮ ಆಸುಪಾಸಿನಲ್ಲೇ ಇರುವ ಹುಡುಗಿಯ ಬಗ್ಗೆಯೂ ಯೋಚನೆ ಮಾಡ್ತಾರೆ.