ಪ್ರಪಂಚವು ಅನೇಕ ರೀತಿಯ ಅಪಾಯಕಾರಿ ಪ್ರಾಣಿಗಳಿಂದ ತುಂಬಿದೆ. ಕೆಲವು ಅತ್ಯಂತ ವಿಷಕಾರಿಯಾಗಿದ್ದರೆ ಇನ್ನು ಕೆಲವು ಜೀವಿಗಳು ಮಾರಣಾಂತಿಕ ಕಾಯಿಲೆಗಳನ್ನು ಉಂಟುಮಾಡುತ್ತವೆ. ವಿಶ್ವದ ಅತ್ಯಂತ ಅಪಾಯಕಾರಿ ಜೀವಿಗಳು ಯಾವುವು ಅನ್ನೋದನ್ನು ನೋಡೋಣ.
ಸೊಳ್ಳೆ
ಸೊಳ್ಳೆಗಳು ವಿಶ್ವದ ಅತ್ಯಂತ ಮಾರಕ ಜೀವಿಗಳು. ಸೊಳ್ಳೆಗಳ ಕಡಿತದಿಂದ ಮಲೇರಿಯಾ, ಡೆಂಗ್ಯೂನಂತಹ ಮಾರಣಾಂತಿಕ ಕಾಯಿಲೆಗಳು ಹರಡುತ್ತವೆ. ಮಲೇರಿಯಾದಿಂದ ಪ್ರತಿ ವರ್ಷ ಸುಮಾರು 8 ಲಕ್ಷ ಜನರು ಸಾಯುತ್ತಾರೆ.
ಮನುಷ್ಯ
ಮಾನವರು ಕೂಡ ವಿಶ್ವದ ಅತ್ಯಂತ ಅಪಾಯಕಾರಿ ಜೀವಿಗಳಾಗಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ವರದಿಯ ಪ್ರಕಾರ ಪ್ರತಿ ವರ್ಷ 4.75 ಲಕ್ಷ ಜನರು ಕೊಲ್ಲಲ್ಪಡುತ್ತಾರೆ.
ಬ್ಲಾಕ್ ಮಂಬಾ ಹಾವು
ಇದು ಆಫ್ರಿಕಾದ ಅತ್ಯಂತ ವಿಷಕಾರಿ ಮತ್ತು ಮಾರಣಾಂತಿಕ ಹಾವು. ಕಪ್ಪು ಮಾಂಬಾ ಕಚ್ಚಿದರೆ ಕೆಲವೇ ಗಂಟೆಗಳಲ್ಲಿ ಸಾವು ಸಂಭವಿಸುತ್ತದೆ.
ಸಾ-ಸ್ಕೇಲ್ಡ್ ವೈಪರ್
ಈ ಹಾವು ತುಂಬಾ ಆಕ್ರಮಣಕಾರಿಯಾಗಿದೆ. ಭಾರತದಲ್ಲಿ ಕಾಣಸಿಗುವ ನಾಗರಹಾವು, ರಸೆಲ್ಸ್ ವೈಪರ್, ಕಾಮನ್ ಕ್ರೈಟ್ ಮತ್ತು ಸಾ ಸ್ಕೇಲ್ಡ್ ವೈಪರ್‌ಗಳ ಕಡಿತದಿಂದ ಭಾರತದಲ್ಲಿ ಪ್ರತಿ ವರ್ಷ 50 ಸಾವಿರಕ್ಕೂ ಹೆಚ್ಚು ಜನರು ಸಾಯುತ್ತಾರೆ.
ನಾಯಿ
ಮನುಷ್ಯನ ಆತ್ಮೀಯ ಸ್ನೇಹಿತರು ಎಂದು ಕರೆಯಲ್ಪಡುವ ನಾಯಿಗಳು ಸಹ ಮಾರಣಾಂತಿಕವಾಗಿವೆ. WHO ಪ್ರಕಾರ ಹುಚ್ಚು ನಾಯಿ ಕಡಿತವು ರೇಬೀಸ್‌ಗೆ ದೊಡ್ಡ ಕಾರಣವಾಗಿದೆ. ರೇಬೀಸ್ ಗುಣಪಡಿಸಲಾಗದಂತಹ ಅಪಾಯಕಾರಿ ಕಾಯಿಲೆ.