ಸಾಮಾನ್ಯವಾಗಿ ಏಲಕ್ಕಿಯನ್ನು ಪಾಯಸ ಅಥವಾ ಇತರ ಸಿಹಿತಿಂಡಿಗಳನ್ನು ತಯಾರಿಸುವ ವೇಳೆ ಬಳಸಲಾಗುತ್ತದೆ. ಅದರ ಹೊರತಾಗಿಯೂ ಏಲಕ್ಕಿಯಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ?
ಬಾಯಿಯ ದುರ್ವಾಸನೆಯನ್ನು ದೂರಮಾಡುವ ಶಕ್ತಿ ಇದಕ್ಕಿದೆ. ಇದು ಕೆಟ್ಟ ವಾಸನೆಯನ್ನು ಹೋಗಲಾಡಿಸಿ ನಿಮ್ಮ ಉಸಿರನ್ನು ಫ್ರೆಶ್ ಆಗಿಸುತ್ತದೆ. ಎಲ್ಲಾ ಸಮಯದಲ್ಲೂ ನೀವು ಏಲಕ್ಕಿಯನ್ನು ಬಾಯಿಯಲ್ಲಿ ಇಟ್ಟುಕೊಳ್ಳಬಹುದು.
ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ದೂರದೂರಿಗೆ ಪ್ರಯಾಣ ಮಾಡುವಾಗ ವಾಂತಿಯಾಗುವ ಸಮಸ್ಯೆಯನ್ನು ದೂರ ಮಾಡುತ್ತದೆ. ಇದನ್ನು ಬಾಯಿಯಲ್ಲಿ ಇಟ್ಟುಕೊಂಡು ಅದರ ನೀರನ್ನು ನುಂಗುತ್ತಿದ್ದರೆ ಸಾಕು.
ಇದರಲ್ಲಿ ಎಣ್ಣೆಯ ಅಂಶವೂ ಇದ್ದು ಇದು ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಿಗೆ ಅದರಿಂದ ಹೊರಬರಲು ನೆರವಾಗುತ್ತದೆ. ಅಸ್ತಮಾ ರೋಗಿಗಳು ಚಳಿಗಾಲದಲ್ಲಿ ಇದನ್ನು ಬಾಯಿಯಲ್ಲಿ ಇಟ್ಟುಕೊಂಡರೆ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ಆಹಾರದೊಂದಿಗೆ ಬೆರೆಸಿಯೂ ಇದನ್ನು ಸೇವಿಸಬಹುದು.