alex Certify ದುಡಿಯುವ ‘ಮಹಿಳೆ’ ಬಯಸುವುದೇನು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಡಿಯುವ ‘ಮಹಿಳೆ’ ಬಯಸುವುದೇನು ಗೊತ್ತಾ…..?

ಮಧ್ಯಮ ವರ್ಗದಲ್ಲಿ ಇಂದು ಗಂಡ- ಹೆಂಡತಿ ದುಡಿದರಷ್ಟೇ ಸುಖವಾಗಿ ಜೀವಿಸಬಹುದೆಂಬ ಪರಿಸ್ಥಿತಿಯಿದೆ. ಬೆಲೆ ಏರಿಕೆಯ ಇಂದಿನ ದಿನಮಾನಗಳಲ್ಲಿ ದಂಪತಿಗಳು ದುಡಿದರಷ್ಟೇ ಮಹಾ ನಗರಗಳಲ್ಲಿ ಒಂದಷ್ಟು ನೆಮ್ಮದಿಯಿಂದ ಜೀವನ ಸಾಗಿಸಬಹುದಾಗಿದೆ.

ಪುರುಷರಷ್ಟೇ ಸಮಾನವಾಗಿ ದುಡಿಯುತ್ತಿದ್ದರೂ ಮಹಿಳೆಯರನ್ನು ಇಂದಿಗೂ ಕಡೆಗಣಿಸಲಾಗುತ್ತಿದೆ. ಎಲ್ಲ ಕ್ಷೇತ್ರಗಳಲ್ಲೂ ಇಂದು ಮಹಿಳೆಯರು ಛಾಪು ಮೂಡಿಸಿದ್ದರೂ ಅವರಿಗೆ ಎಲ್ಲ ವಿಷಯಗಳಲ್ಲೂ ಪ್ರಾಧಾನ್ಯತೆ ನೀಡಲಾಗುತ್ತಿಲ್ಲ.

ಹೊರಗಡೆಯೂ ಪುರುಷರಿಗೆ ಸಮಾನವಾಗಿ, ಕೆಲವೊಮ್ಮೆ ಅದಕ್ಕಿಂತ ಹೆಚ್ಚು ದುಡಿದರೂ ಅವರಿಗೆ ಸಿಗಬೇಕಾದ ಮಹತ್ವ ದೊರೆಯುತ್ತಿಲ್ಲ. ಅಧ್ಯಯನವೊಂದರಲ್ಲಿ ಬಹಿರಂಗವಾದ ಸಂಗತಿ ಏನೆಂದರೆ ಮನೆಯಲ್ಲೂ ಕಷ್ಟ ಪಡುವ ದುಡಿಯುವ ಮಹಿಳೆ, ಸಂಜೆ ಮನೆಗೆ ಹಿಂದಿರುಗಿದಾಗ ಕಡೇ ಪಕ್ಷ ಟೀ ಮಾಡಿ ಕೊಟ್ಟರೆ ಎಷ್ಟು ಚೆನ್ನ ಎಂದು ಭಾವಿಸುತ್ತಾರಂತೆ. ಅಷ್ಟೇ ಅಲ್ಲ ಆಹಾರ ಮಾಡಿಟ್ಟಿದ್ದರೆ ಮಾರನೇ ದಿನದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲು ಮೂಡ್ ಬರುತ್ತದಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...