ಮಹಿಳೆಯರು ಏನನ್ನು ಬಯಸ್ತಾರೆ? ಪುರುಷರಿಗೆ ಉತ್ತರ ಸಿಗದ ಪ್ರಶ್ನೆ ಇದು. ಕೆಲಸ, ಹಣ, ಒತ್ತಡದ ಜೀವನದಲ್ಲಿ ಗಂಡನಾದವನು ಹೆಂಡತಿ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಇದೇ ಗಲಾಟೆ, ಮನಸ್ತಾಪ ಹಾಗೂ ರೋಮ್ಯಾಂಟಿಕ್ ಜೀವನದ ಮೇಲೆ ಪರಿಣಾಮ ಬೀರಲು ಕಾರಣವಾಗುತ್ತದೆ.
ಮನೋವಿಜ್ಞಾನಿಗಳ ಪ್ರಕಾರ ಆರಂಭದಲ್ಲಿ ಪ್ರತಿಯೊಬ್ಬ ಪುರುಷ ತನ್ನ ಪತ್ನಿಯ ಬಗ್ಗೆ ಹೆಚ್ಚಿನ ಗಮನ ನೀಡ್ತಾನೆ. ಅವರ ರೋಮ್ಯಾಂಟಿಕ್ ಲೈಫ್ ಕೂಡ ಚೆನ್ನಾಗಿಯೇ ಇರುತ್ತೆ. ಆದ್ರೆ ದಿನ ಕಳೆದಂತೆ ಪತಿ ಹೆಚ್ಚೆಚ್ಚು ಹಣ ಗಳಿಸುವುದಕ್ಕೆ ಮಹತ್ವ ನೀಡುತ್ತಾನೆ. ಪತ್ನಿಯ ಸಣ್ಣ ಪುಟ್ಟ ಆಸೆಯನ್ನೂ ನಿರ್ಲಕ್ಷಿಸ್ತಾನೆ. ಇದು ಇಬ್ಬರ ನಡುವೆ ಅಂತರ ಹೆಚ್ಚಾಗಲು ಕಾರಣವಾಗುತ್ತದೆ.
ರೊಮ್ಯಾನ್ಸ್ : ಪ್ರತಿಯೊಬ್ಬ ಮಹಿಳೆ ರೋಮ್ಯಾಂಟಿಕ್ ಪತಿಯನ್ನು ಬಯಸ್ತಾಳೆ. ರೋಮ್ಯಾಂಟಿಕ್ ಪತಿ ಇದ್ದೂ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುವುದು ಬಹಳ ಅಪರೂಪ. ಪ್ರೀತಿ ಮಾಡುವಾಗ ಇಲ್ಲ ಮದುವೆಗಿಂತ ಮೊದಲು ಪತಿಯಾದವನು ಯಾವ ರೀತಿ ಪ್ರೀತಿ ತೋರಿಸುತ್ತಿದ್ದನೋ ಅದೇ ರೀತಿ ಮದುವೆಯಾದ್ಮೇಲೂ ಪತಿ ತನ್ನ ಹಿಂದೆ ಹಿಂದೆ ಸುತ್ತಬೇಕೆಂದು ಮಹಿಳೆ ಬಯಸ್ತಾಳೆ.
ಪ್ರೀತಿಗಾಗಿ ಎರಡು ನಿಮಿಷ: ಪತಿಯಿಂದ ಹೆಂಡತಿಯಾದವಳು ಬಯಸುವುದು ಆತನ ಪ್ರೀತಿ ಹಾಗೂ ಸಮಯ. ಮದುವೆಯಾದ ಕೆಲ ವರ್ಷಗಳ ಕಾಲ ಪತಿಯ ಸಣ್ಣ ಪುಟ್ಟ ವಿಚಾರಗಳಿಗೂ ಮಹತ್ವ ನೀಡುವ ಪತಿ ಆಕೆಯ ಜೊತೆ ಸಾಕಷ್ಟು ಸಮಯ ಕಳೆಯುತ್ತಾನೆ. ಆದ್ರೆ ಕೆಲ ವರ್ಷಗಳಲ್ಲಿಯೇ ಆತನ ವರ್ತನೆಯಲ್ಲಿ ಬದಲಾವಣೆಗಳು ಕಂಡು ಬರುತ್ತವೆ. ಆಫೀಸಿನ ಕೆಲಸವನ್ನು ಮನೆಯಲ್ಲಿ ಮಾಡೋದು, ತಡ ರಾತ್ರಿ ಮನೆಗೆ ಬರೋದು, ಬ್ಯುಸಿನೆಸ್ ಟ್ರಿಪ್ ಹೆಸರಿನಲ್ಲಿ ಹೊರಗೆ ಸಾಕಷ್ಟು ಸಮಯ ಕಳೆಯೋದು ಹೀಗೆ ಮಡದಿಯನ್ನು ಮರೆತು ಬಿಡ್ತಾನೆ ಪತಿ. ಕೆಲಸ, ಹಣಕ್ಕೆ ಹೆಚ್ಚು ಮಹತ್ವ ನೀಡುವುದರಿಂದ ವೈಯಕ್ತಿಕ ಬದುಕು ಸತ್ತು ಹೋಗುತ್ತದೆ. ಪತ್ನಿಯಾದವಳು ದಿನದಲ್ಲಿ ಕೇವಲ ಎರಡು ನಿಮಿಷವಾದ್ರೂ ಗಂಡ ನನ್ನ ಜೊತೆಗಿರಲೆಂದು ಬಯಸ್ತಾಳೆ.
ವಾರಾಂತ್ಯದ ಆನಂದ: ವಾರ ಪೂರ್ತಿ ಮನೆ ಕೆಲಸ, ಮಕ್ಕಳ ಕೆಲಸ, ಕುಟುಂಬ ನಿರ್ವಹಣೆಯಲ್ಲಿ ಕಳೆಯುವ ಮಹಿಳೆ ವಾರಾಂತ್ಯದಲ್ಲಿ ಗಂಡನ ಜೊತೆ ಸಮಯ ಕಳೆಯಲು ಬಯಸ್ತಾಳೆ. ಪತಿಯಾದವನು ಹೊರಗೆ ಕರೆದುಕೊಂಡು ಹೋಗ್ಲಿ, ಶಾಪಿಂಗ್ ಮಾಡಿಸ್ಲಿ ಎಂದು ಬಯಸ್ತಾಳೆ. ಆದ್ರೆ ಪುರುಷ ಈ ಬಗ್ಗೆ ಗಮನ ನೀಡುವುದಿಲ್ಲ. ಇದು ಮಹಿಳೆಯ ದುಃಖಕ್ಕೆ ಕಾರಣವಾಗುತ್ತದೆ.