ಲಾವಂಚದ ಬೇರಿನ ಉಪಯೋಗಗಳ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ. ಇದನ್ನು ಬಿಸಿನೀರಿಗೆ ಹಾಕಿ ಕುದಿಸಿ ತಣಿಸಿ ಕುಡಿಯುವುದರಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಅದರ ಹೊರತಾಗಿ ಅದನ್ನು ನಿಮ್ಮ ಕೊಠಡಿಯಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ಮನೆಯನ್ನು ತಂಪಾಗಿಸಬಹುದು. ಲಾವಂಚದ ಹುಲ್ಲನ್ನು ನಿಮ್ಮ ಕೋಣೆಗೆ ಕಿಟಕಿಗಳಿಗೆ ಕಟ್ಟಿ. ದಿನಕ್ಕೆರಡು ಬಾರಿ ಅದಕ್ಕೆ ನೀರು ಸಿಂಪಡಿಸಿ.
ಕುಡಿಯುವ ನೀರಿನ ಪಾತ್ರೆಗೆ ಅಥವಾ ಹೂಜಿಗೆ ಲಾವಂಚದ ಬೇರನ್ನು ಹಾಕಿಟ್ಟು ಅರ್ಧ ಗಂಟೆ ಬಳಿಕ ಕುಡಿಯಿರಿ. ಇದು ತಂಪಾಗಿ, ಶುದ್ಧವಾಗಿರುತ್ತದೆ.
ನೆನೆಸಿಟ್ಟ ಲಾವಂಚದ ಮೇಲೆ ತರಕಾರಿ ಹಣ್ಣುಗಳನ್ನು ಇಟ್ಟರೆ ಅದು ಬೇಗ ಕೆಡುವುದಿಲ್ಲ. ಕಾಲುಗಳು ವಿಪರೀತ ಸುಸ್ತಾಗಿದ್ದರೆ ಲಾವಂಚದ ಬೇರಿನ ಮೇಲೆ ಐದು ನಿಮಿಷ ಇಟ್ಟು ನೋಡಿ, ನೋವು ಮಾಯವಾಗಿ ಕಾಲುಗಳಿಗೆ ತಂಪಾದ ಅನುಭವವಾಗುತ್ತದೆ.