![Kushi Twitter Review: Vijay Deverakonda And Samantha Ruth Prabhu's Love Story Strikes Chord With Netizens | See Reactions](https://imgeng.jagran.com/images/2023/sep/kushitwitterreview1693539605935.jpg)
ಸೆಪ್ಟೆಂಬರ್ ಒಂದರಂದು ಬಿಡುಗಡೆಯಾಗಿದ್ದ ವಿಜಯ್ ದೇವರಕೊಂಡ ಹಾಗೂ ಸಮಂತಾ ಅಭಿನಯದ ‘ಖುಷಿ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಮೊದಲ ದಿನವೇ 30 ಕೋಟಿ ರೂ ಬಾಚಿದ್ದ ಈ ಚಿತ್ರ ಒಟ್ಟಾರೆ ಮೂರು ದಿನಕ್ಕೆ 70.23 ಕೋಟಿ ರೂ. ಹಣ ಗಳಿಸಿದೆ. ಈ ವಿಚಾರವನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.
ಶಿವ ನಿರ್ವಾಣ ನಿರ್ದೇಶನದ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಡಿ ನವೀನ್ ಹಾಗೂ ವೈ. ರವಿಶಂಕರ್ ನಿರ್ಮಾಣ ಮಾಡಿದ್ದು, ಹೇಶಾಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜನೆ ನೀಡಿದ್ದಾರೆ.
ಸ್ಯಾಂಡಲ್ ವುಡ್ ನ ಹಿರಿಯ ನಟಿ ಲಕ್ಷ್ಮಿ ಸೇರಿದಂತೆ ಶ್ರೀಕಾಂತ್ ಅಯ್ಯಂಗಾರ್, ಭರತ್ ರೆಡ್ಡಿ, ವೆನ್ನೆಲ ಕಿಶೋರ್, ರೋಹಿಣಿ, ರಾಹುಲ್ ರಾಮಕೃಷ್ಣ, ಶಾರಣ್ಯ ಪ್ರದೀಪ್ ಬಣ್ಣ ಹಚ್ಚಿದ್ದಾರೆ.
![](https://kannadadunia.com/wp-content/uploads/2023/09/006c0bfb-88cb-4eca-bdc4-522295360688-400x622.jpg)