
ಸಾಂಕ್ರಾಮಿಕ ರೋಗ ಡೆಂಗ್ಯೂ ಬಗ್ಗೆ ತಿಳಿದುಕೊಳ್ಳಬೇಕಾದ ಮುಖ್ಯ ಮಾಹಿತಿ ಇಲ್ಲಿದೆ, ಡೆಂಗ್ಯೂಗೆ ಕಾರಣ ಹೆಮರಾಜಿಕ್ ಸಾಫ್ಟ್ ಸಿಂಡ್ರೋಮ್ ಸೇರಿದಂತೆ 4 ವಿಧದ ವೈರಾಣುಗಳಿವೆ. ಇದರಲ್ಲಿ ವೈರಾಣು 1 ಬಂದರೆ ಗುಣವಾಗುತ್ತದೆ.
ಒಮ್ಮೆ ಡೆಂಗ್ಯೂ ಬಂದವರಿಗೆ ಮತ್ತೊಮ್ಮೆ ವೈರಾಣು 2 ಮತ್ತು 3 ಬಂದರೆ ಅದರ ಪರಿಣಾಮ ತುಂಬಾ ಗಂಭೀರವಾಗುತ್ತದೆ ಎನ್ನುತ್ತಾರೆ ವೈದ್ಯರು. ದಿಢೀರ್ ಜ್ವರ, ತಲೆ ನೋವು, ಮೂಗಿನಲ್ಲಿ ಸೋರುವಿಕೆ, ಗಂಟಲು ನೋವು, ವಾಂತಿ, ಹೊಟ್ಟೆ ನೋವು, ಮೈ ಕೈ ನೋವು ಇವು ಆರಂಭಿಕ ಲಕ್ಷಣಗಳು.
ನಂತರದ ಹಂತದ ಲಕ್ಷಣಗಳೆಂದರೆ ಕರುಳಿನಲ್ಲಿ ರಕ್ತ ಸ್ರಾವ, ಅತಿಸಾರ. ಹಾಗಾಗಿ ರೋಗದ ಲಕ್ಷಣಗಳು ಕಂಡು ಬಂದ ಕೂಡಲೇ ಚಿಕಿತ್ಸೆ ಪಡೆಯುವುದು ಸೂಕ್ತವಾಗಿದೆ. ಹಾಗೂ ಡೆಂಗ್ಯೂ, ಚಿಕೂನ್ ಗುನ್ಯಾ ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು.