ಜನರು ಸಾಮಾನ್ಯವಾಗಿ ಶುಭ ಕಾರ್ಯಗಳಲ್ಲಿ ಹಳದಿ ಬಟ್ಟೆಯನ್ನು ಧರಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲೂ ಹಳದಿ ಬಣ್ಣಕ್ಕೆ ಮಹತ್ವದ ಸ್ಥಾನವಿದೆ. ಹಳದಿ ಬಣ್ಣವನ್ನು ಗುರು ಗ್ರಹಕ್ಕೆ ಹೋಲಿಕೆ ಮಾಡಲಾಗುತ್ತದೆ. ಹಳದಿ ಬಣ್ಣದಿಂದ ಸಾಕಷ್ಟು ಪ್ರಯೋಜವಿದೆ.
ಹಳದಿ ಬಣ್ಣ ಜೀರ್ಣಾಂಗ, ರಕ್ತ ಪರಿಚಲನೆ, ಕಣ್ಣಿಗೆ ನೇರವಾಗಿ ಪರಿಣಾಮ ಬೀರುತ್ತದೆ. ಈ ಬಣ್ಣಕ್ಕೆ ಮನಸ್ಸನ್ನು ಬದಲಿಸುವ ಶಕ್ತಿಯಿದೆ. ಇದು ಗುರು ಗ್ರಹದ ಪ್ರಮುಖ ಬಣ್ಣವಾಗಿದೆ.
ಹಳದಿ ಬಣ್ಣ ಜೀವನಕ್ಕೆ ಶುಭಕರ. ಮನಸ್ಸಿಗೆ ಶಕ್ತಿ ತುಂಬಿ ನಕಾರಾತ್ಮಕ ಆಲೋಚನೆಗಳನ್ನು ದೂರ ಮಾಡುತ್ತದೆ. ದೃಷ್ಟಿ ದೋಷ ಹಾಗೂ ನಕಾರಾತ್ಮಕ ಗುಣವನ್ನು ದೂರ ಮಾಡುತ್ತದೆ.
ಓದುವ ಹಾಗೂ ದೇವರ ಮನೆಯಲ್ಲಿ ಹಳದಿ ಬಣ್ಣವನ್ನು ಬಳಕೆ ಮಾಡಬೇಕು. ಮನೆಯ ಹೊರ ಬಾಗಿಲಿಗೂ ಹಳದಿ ಬಣ್ಣವನ್ನು ಪ್ರಯೋಗ ಮಾಡಬಹುದು. ಮನೆಯ ಒಳಗಿನ ಗೋಡೆಗೆ ತಿಳಿ ಹಳದಿ ಬಣ್ಣವನ್ನು ಹಚ್ಚಬೇಕು. ನಕಾರಾತ್ಮಕ ಶಕ್ತಿಯಿಂದ ರಕ್ಷಣೆ ಪಡೆಯಲು ಹಳದಿ ಬಣ್ಣದ ಕರವಸ್ತ್ರ ಬಳಸಬೇಕು. ಅರಿಶಿನದ ತಿಲಕ ಹಚ್ಚಿ ಮನಸ್ಸನ್ನು ಶುದ್ಧ ಹಾಗೂ ಸ್ವಚ್ಛವಾಗಿಟ್ಟುಕೊಳ್ಳಬಹುದು.