
ಬಾಲಿವುಡ್ ನಟಿ ರೇಖಾ ಸೌಂದರ್ಯ ಮತ್ತು ಫಿಟ್ ನೆಸ್ ಗೆ ಉತ್ತಮ ಉದಾಹರಣೆಯಾಗಿದ್ದಾರೆ. ವಯಸ್ಸಾದರೂ ಅವರ ಸೌಂದರ್ಯ ಒಂದಿನಿತೂ ಕುಂದಿಲ್ಲ. ಹಾಗಾದ್ರೆ ಅವರ ಈ ಸೌಂದರ್ಯದ ರಹಸ್ಯ ಏನೆಂಬುದನ್ನು ತಿಳಿಯೋಣ.
ನಟಿ ರೇಖಾ ಅವರು ಪ್ರತಿದಿನ ಮೊಸರು, ಸಿಹಿ ಗಂಜಿಯನ್ನು ಸೇವಿಸುತ್ತಾರಂತೆ. ಪ್ರತಿದಿನ ಯೋಗ ಮಾಡುತ್ತಾರಂತೆ. ಫಾಸ್ಟ್ ಫುಡ್ ಮತ್ತು ಮಸಾಲೆಯುಕ್ತ ಹಾಗೂ ಫ್ರೈಡ್ ಫುಡ್ ನಿಂದ ದೂರವಿರುತ್ತಾರಂತೆ. ಹಸಿರು ತರಕಾರಿ, ಹಣ್ಣುಗಳನ್ನು ಸೇವಿಸುತ್ತಾರಂತೆ.
ಹಾಗೇ ಸೌಂದರ್ಯ ಕಾಪಾಡಿಕೊಳ್ಳಲು ಅವರು, ಮೂಂಗ್ ದಾಲ್, ಗ್ರಾಂ ಹಿಟ್ಟು, ಮೊಸರು, ರೋಸ್ ವಾಟರ್ ನಿಂದ ತಯಾರಿಸಿದ ಫೇಸ್ ಪ್ಯಾಕ್ ಬಳಸುತ್ತಾರಂತೆ. ಕೂದಲಿನ ಸೌಂದರ್ಯ ಕಾಪಾಡಲು ನೆನೆಸಿದ ಮಸೂರ್ ದಾಲ್ ಪೇಸ್ಟ್ ಗೆ ಮೊಸರನ್ನು ಬಳಸಿ ಹೇರ್ ಪ್ಯಾಕ್ ತಯಾರಿಸಿ ವಾರದಲ್ಲಿ 4 ಬಾರಿ ಹಚ್ಚುತ್ತಾರಂತೆ. ಅಲ್ಲದೇ ಮುಖ ಮತ್ತು ಚರ್ಮ ಆಕರ್ಷಕವಾಗಿಡಲು ಸಾಕಷ್ಟು ಪ್ರಮಾಣದ ನೀರನ್ನು ಕುಡಿಯುತ್ತಾರಂತೆ. ಹಾಗೇ ಹಣ್ಣುಗಳ ರಸ, ಎಳನೀರು, ತರಕಾರಿ ಸೂಪ್ ಸೇವಿಸುತ್ತಾರಂತೆ.