ಜೀವನದಲ್ಲಿ ಒಮ್ಮೆಯಾದ್ರೂ ವಿಮಾನ ಪ್ರಯಾಣ ಮಾಡ್ಬೇಕು ಎನ್ನುವವರಿದ್ದಾರೆ. ಅನೇಕರು ತಿಂಗಳಿಗೊಮ್ಮೆ ವಿಮಾನ ಪ್ರಯಾಣ ಮಾಡ್ತಾರೆ. ಮತ್ತೆ ಕೆಲವರು ಜೀವನದಲ್ಲಿ ಒಮ್ಮೆ ವಿಮಾನ ಪ್ರಯಾಣ ಮಾಡಿರ್ತಾರೆ. ಆದ್ರೆ ವಿಮಾನದಲ್ಲಿ ಪ್ರಯಾಣ ಮಾಡದೆ ಹೋದ್ರೂ ವಿಮಾನವನ್ನು ಬಹುತೇಕರು ನೋಡಿರುತ್ತಾರೆ. ಫೋಟೋದಲ್ಲಿಯಾದ್ರೂ ವಿಮಾನ ನೋಡಿರ್ತಾರೆ. ಎಲ್ಲ ವಿಮಾನದ ಬಣ್ಣ ಬಿಳಿಯಾಗಿರುತ್ತೆ. ಇದು ಯಾಕೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.
ವಿಮಾನದ ಬಣ್ಣ ಬಿಳಿಯಾಗಿರಲು ವೈಜ್ಞಾನಿಕ ಕಾರಣವಿದೆ. ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯಲು ಇದು ನೆರವಾಗುತ್ತದೆ. ರನ್ ವೇಯಿಂದ ಹಿಡಿದು ಹಾರಾಟದವರೆಗೆ ವಿಮಾನ ಸೂರ್ಯನ ಕಿರಣದಡಿಯಿರುತ್ತದೆ. ಸೂರ್ಯನ ಶಾಖ, ವಿಮಾನದೊಳಗೆ ಹೆಚ್ಚು ಸೆಕೆಯನ್ನುಂಟು ಮಾಡುತ್ತದೆ. ಸೂರ್ಯನ ಕಿರಣ ನೇರವಾಗಿ ವಿಮಾನದ ಮೇಲೆ ಬೀಳುತ್ತದೆ. ಬಿಳಿ ಬಣ್ಣ ಸೂರ್ಯನ ಕಿರಣಗಳಿಂದ ವಿಮಾನವನ್ನು ರಕ್ಷಿಸುತ್ತದೆ. ಇದೇ ಕಾರಣಕ್ಕೆ ವಿಮಾನಕ್ಕೆ ಬಿಳಿ ಬಣ್ಣ ಹಚ್ಚಲಾಗುತ್ತದೆ.
ಇಷ್ಟೇ ಅಲ್ಲ ವಿಮಾನದಲ್ಲಿ ಯಾವುದೇ ಬಿರುಕಿದ್ದರೂ, ಬಿಳಿ ಬಣ್ಣದಲ್ಲಿ ಸುಲಭವಾಗಿ ಕಾಣಿಸುತ್ತದೆ. ಬೇರೆ ಬಣ್ಣದಲ್ಲಿ ಬಿರುಕು ಮರೆಮಾಚುವ ಸಾಧ್ಯತೆಯಿದೆ. ವಿಮಾನ ನಿರ್ವಹಣೆಗೆ ಬಿಳಿ ಬಣ್ಣ ಸಹಕಾರಿಯಾಗಿದೆ. ಇದ್ರ ಜೊತೆಗೆ ಬಿಳಿ ಬಣ್ಣದ ತೂಕ ಕೂಡ ಮಹತ್ವ ಪಡೆಯುತ್ತದೆ. ಬೇರೆ ಬಣ್ಣಗಳಿಗೆ ಹೋಲಿಕೆ ಮಾಡಿದ್ರೆ ಬಿಳಿ ಬಣ್ಣದ ತೂಕ ಕಡಿಮೆ. ಆಕಾಶದಲ್ಲಿ ವಿಮಾನ ಹಾರಾಟ ನಡೆಸುವುದ್ರಿಂದ ತೂಕ ಕೂಡ ಮಹತ್ವ ಪಡೆಯುತ್ತದೆ.