ಒಬ್ಬೊಬ್ಬರು ಒಂದೊಂದು ಬಗೆಯ ಆಹಾರ ಇಷ್ಟ ಪಡ್ತಾರೆ. ಕೆಲವರಿಗೆ ಸ್ವೀಟ್ ಇಷ್ಟವಾದ್ರೆ ಮತ್ತೆ ಕೆಲವರಿಗೆ ಸ್ಪೈಸಿ ಐಟಂಗಳು ಇಷ್ಟ. ಅದರಲ್ಲೂ ತಮ್ಮೂರಿನ ತಿಂಡಿ ಎಂದ್ರೆ ಹೆಚ್ಚಿನ ಪ್ರೀತಿ ಹಾಗೂ ಆಸಕ್ತಿ. ಸಾಂಪ್ರದಾಯಿಕ ಅಡುಗೆಯ ಸವಿ ಸವಿಯುವುದಲ್ಲದೇ ಅದರ ರೆಸಿಪಿ ಬರೆದುಕೊಂಡು ಟ್ರೈ ಕೂಡ ಮಾಡ್ತಾರೆ.ಪ್ರಾಚೀನ ಕಾಲದಿಂದಲೂ ರೆಸಿಪಿ ವಿನಿಮಯ ನಡೆದೇ ಇದೆ. ವಿದೇಶದಿಂದ ಅನೇಕ ರೆಸಿಪಿಗಳನ್ನು ನಾವು ಪಡೆದಿದ್ದೇವೆ. ಅದಕ್ಕೆ ನಮ್ಮ ನೆಲದ ಮಸಾಲೆ ಸೇರಿಸಿ ಮತ್ತಷ್ಟು ರುಚಿ ಹಾಗೂ ಶುಚಿಗೊಳಿಸಿದ್ದೇವೆ.ವಿಶ್ವಾದ್ಯಂತ ಜನಪ್ರಿಯವಾಗಿರುವ, ರಾಜ್ಮಾ ಚಾವಲ್, ಗುಲಾಬ್ ಜಾಮೂನ್, ಜಿಲೇಬಿ ಈವೆಲ್ಲದರ ಮೂಲ ಭಾರತ ಎನ್ನಲಾಗುತ್ತೆ. ಆದ್ರೆ ಆಳವಾಗಿ ಪರಿಶೀಲನೆ ಮಾಡಿದಾಗ ನಾವು ಇದರ ರೆಸಿಪಿಯನ್ನೂ ವಿದೇಶದಿಂದ ಪಡೆದಿದ್ದೇವೆ.ರಾಜ್ಮಾ ಚಾವಲ್ – ಉತ್ತರ ಭಾರತೀಯ ಆಹಾರವೆಂದು ನಾವು ಹೇಳ್ತೇವೆ. ಆದ್ರೆ ಅದರ ಮೂಲ ಮಧ್ಯ ಮೆಕ್ಸಿಕೋ.
ಸಮೋಸ – ಬಾಯಿ ಚಪ್ಪರಿಸಿಕೊಂಡು ತಿನ್ನುವ ಸಮೋಸದ ಮೂಲ ಕೂಡ ಭಾರತವಲ್ಲ. ಮಧ್ಯ ಪ್ರಾಚ್ಯದಿಂದ ಪಡೆದಿದ್ದು.
ಗುಲಾಬ್ ಜಾಮೂನ್ – ಹಬ್ಬದಲ್ಲಿ ಇರಲೇಬೇಕಾದ ಒಂದು ಸ್ವೀಟ್ ಗುಲಾಬ್ ಜಾಮೂನ್. ಪಶ್ಚಿಮ ಬಂಗಾಳದಲ್ಲಿ ಪ್ರಸಿದ್ಧವಾಗಿರುವ ಈ ಜಾಮೂನ್ ಹುಟ್ಟಿದ್ದು ಮೆಡಿಟರೇನಿಯನ್ ಮತ್ತು ಪರ್ಷಿಯಾದಲ್ಲಿ.
ಜಿಲೇಬಿ – ಅಚ್ಚುಮೆಚ್ಚಿನ ತೆಳುವಾದ ಮತ್ತು ಗರಿಗರಿಯಾದ ಸಿಹಿ ಖಾದ್ಯವನ್ನು ಉತ್ತರ ಭಾರತೀಯರು ತಿನ್ನೋದು ಜಾಸ್ತಿ. ಇದರ ಹುಟ್ಟು ಕೂಡ ಮಧ್ಯ ಪ್ರಾಚ್ಯದಲ್ಲಾಗಿದೆ.