ದೇಹದಲ್ಲಿ ಆಮ್ಲಜನಕದ ಕೊರತೆಯಾದ್ರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೇಹದಲ್ಲಿ ಆಮ್ಲಜನಕ ಮಟ್ಟ ಕಡಿಮೆಯಾಗ್ತಿದ್ದಂತೆ ಆಸ್ತಮಾ, ಅಲರ್ಜಿ, ಮೈಗ್ರೇನ್, ಶ್ವಾಸಕೋಶದಲ್ಲಿ ಸೋಂಕು, ಕೆಮ್ಮು ಮತ್ತು ಕಣ್ಣಿನ ದೌರ್ಬಲ್ಯ ಕಾಣಿಸಿಕೊಳ್ತದೆ. ನಮ್ಮ ದೇಹದಲ್ಲಿ ಆಮ್ಲಜನಕ ಮಟ್ಟವನ್ನು ಹೆಚ್ಚಿಸಲು ತುಳಸಿ ಪ್ರಯೋಜನಕಾರಿ.
ದೇಹದಲ್ಲಿ ಶೇಕಡಾ 90 ರಿಂದ ಶೇಕಡಾ 100 ರಷ್ಟು ಆಮ್ಲಜನಕದ ಕೊರತೆಯು ಅನಾರೋಗ್ಯಕ್ಕೆ ಕಾರಣವಾಗುತ್ತದೆ. 90 ರಷ್ಟು ಕಡಿಮೆ ಆಮ್ಲಜನಕವಿದ್ರೆ ಆಯಾಸ, ಚರ್ಮದ ಅಲರ್ಜಿ, ಕಣ್ಣಿನ ಸಮಸ್ಯೆ, ಶೀತ, ಆಸ್ತಮಾ ಇತ್ಯಾದಿಗಳಿಗೆ ಕಾರಣವಾಗುತ್ತದೆ.
ತುಳಸಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಪರಿಸರ ಮಾಲಿನ್ಯವನ್ನು ತಡೆಯುತ್ತದೆ. ಮನೆಯ ಮುಂದೆ ತುಳಸಿ ಗಿಡವಿದ್ರೆ ಅದು ಮಾಲಿನ್ಯವನ್ನು ಶೇಕಡಾ 30ರಷ್ಟು ಕಡಿಮೆ ಮಾಡುತ್ತದೆ. ಹಾಗಾಗಿ ಮನೆ ಮುಂದೆ ತುಳಸಿ ಗಿಡವಿರುವಂತೆ ನೋಡಿಕೊಳ್ಳಿ. ಜೊತೆಗೆ ತುಳಸಿಯ ರಸವನ್ನು ಸೇವಿಸಿ.
ಹತ್ತರಿಂದ ಹನ್ನೆರಡು ಎಲೆ ತುಳಸಿಯನ್ನು ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ನಂತ್ರ ಅದಕ್ಕೆ ಮೂರು ಲೋಟ ನೀರು, ಸಣ್ಣ ಶುಂಠಿ, ಎರಡು ಕಾಳು ಮೆಣಸನ್ನು ಹಾಕಿ ಕುದಿಸಿ. ನೀರು ಎರಡು ಲೋಟಕ್ಕೆ ಬಂದ ಮೇಲೆ ಫಿಲ್ಟರ್ ಮಾಡಿ ಆ ನೀರನ್ನು ದಿನದಲ್ಲಿ ಆಗಾಗ ಕುಡಿಯುತ್ತಿರಿ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಆಮ್ಲಜನಕ ಮಟ್ಟವನ್ನು ಹೆಚ್ಚಿಸುತ್ತದೆ.
ತುಳಸಿಯನ್ನು ನಿಯಮಿತವಾಗಿ ಸೇವನೆ ಮಾಡುವುದ್ರಿಂದ ರಕ್ತ ಶುದ್ಧಿಯಾಗುತ್ತದೆ. ಚರ್ಮ ಹೊಳಪು ಪಡೆಯುತ್ತದೆ. ಮಧುಮೇಹಿಗಳು ತುಳಸಿ ಎಲೆಯನ್ನು ಜಗಿಯುತ್ತಿದ್ದರೆ ಒಳ್ಳೆಯದು. ಮೈಗ್ರೇನ್ ಸಮಸ್ಯೆಯಿರುವವರು ತುಳಸಿ ಎಲೆಯನ್ನು ಜಗಿದು ತಿನ್ನಿ.