‘ಗೇಮ್ ಚೇಂಜರ್’ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ…..? 11-01-2025 4:13PM IST / No Comments / Posted In: Featured News, Live News, Entertainment ರಾಮ್ ಚರಣ್ ಅಭಿನಯದ ‘ಗೇಮ್ ಚೇಂಜರ್’ ಚಿತ್ರ ನಿನ್ನೆಯಷ್ಟೇ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ. ಪೊಲಿಟಿಕಲ್ ಆಕ್ಷನ್ ಕಥಾಹಂದರ ಹೊಂದಿರುವ ಈ ಸಿನಿಮಾ ಮೊದಲ ದಿನವೇ 186 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಈ ಚಿತ್ರವನ್ನು ಶಂಕರ್ ನಿರ್ದೇಶಿಸಿದ್ದು, ರಾಮ್ ಚರಣ್ ಸೇರಿದಂತೆ ಅಂಜಲಿ, ಕಿಯಾರಾ ಅಡ್ವಾಣಿ, ಎಸ್ಜೆ ಸೂರ್ಯ, ಶ್ರೀಕಾಂತ್, ಸುನೀಲ್, ಸಮುದ್ರಕನಿ, ರಾಜೀವ್ ಕಣಕಾಲ, ನರೇಶ್, ವೆನ್ನೆಲ ಕಿಶೋರ್, ಶುಭಲೇಖಾ ಸುಧಾಕರ್, ಪೃಥ್ವಿ ರಾಜ್, ರಘು ಬಾಬು, ಚೈತನ್ಯ ಕೃಷ್ಣ, ಅಜಯ್ ಘೋಷ್, ಶ್ರೀನಿವಾಸ ರೆಡ್ಡಿ, ತೆರೆ ಹಂಚಿಕೊಂಡಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ದಿಲ್ ರಾಜು ನಿರ್ಮಾಣ ಮಾಡಿದ್ದು, ಖ್ಯಾತ ಸಂಗೀತ ನಿರ್ದೇಶಕ ತಮನ್ ಎಸ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಶಮೀರ್ ಮಹಮ್ಮದ್, ಹಾಗೂ ರೂಬೆನ್ ಅವರ ಸಂಕಲನ, ಸಾಯಿ ಮಹದೇವ್ ಬುರ್ರಾ ಸಂಭಾಷಣೆ, ತಿರುನಾವುಕ್ಕರಸು ಛಾಯಾಗ್ರಹಣವಿದೆ. View this post on Instagram A post shared by Sri Venkateswara Creations (@srivenkateswaracreations)