ವಲ್ವೊಡಿನಿಯಾದ ಸಾಮಾನ್ಯ ಲಕ್ಷಣವೆಂದರೆ ಯೋನಿ ಪ್ರದೇಶದಲ್ಲಿ ನಿರಂತರ, ಸುಡುವ ಅಥವಾ ಕಚ್ಚುವಂತಹ ನೋವು ಕಂಡುಬರುತ್ತದೆ.
ವಲ್ವೊಡಿನಿಯಾ ಹೊಂದಿರುವ ಅನೇಕ ಮಹಿಳೆಯರು ಯೋನಿಯಲ್ಲಿ ನೋವು ಅಥವಾ ಕಿರಿಕಿರಿಯನ್ನು ಅನುಭವಿಸುತ್ತಾರೆ. ಯೋನಿಯ ಸುತ್ತಲಿನ ಚರ್ಮದಲ್ಲಿ ತುರಿಕೆ ಕಂಡುಬರುತ್ತದೆ.
ಕೆಲವರಿಗೆ, ಟ್ಯಾಂಪೂನ್ ಬಳಸುವಾಗ ಅಥವಾ ಸಂಭೋಗದಂತಹ ಸಮಯದಲ್ಲಿ ಯೋನಿ ಪ್ರವೇಶದ್ವಾರದಲ್ಲಿ ನೋವು ಸಂಭವಿಸುತ್ತದೆ.
ವಲ್ವೊಡಿನಿಯಾದಿಂದ ಸ್ನಾಯು ಸೆಳೆತ ಅಥವಾ ಸಾಮಾನ್ಯ ಪೆಲ್ವಿಕ್ ಫ್ಲೋರ್ ಬಿಗಿತ ಮತ್ತು ಉದ್ವೇಗ ಉಂಟಾಗಬಹುದು. ಅಲ್ಲದೇ ಮೂತ್ರವಿಸರ್ಜನೆಯ ಸಮಯದಲ್ಲಿ ನೀವು ಉರಿಯನ್ನು ಅನುಭವಿಸಬಹುದು.
ವಲ್ವೊಡಿನಿಯಾ ಬೆಳವಣಿಗೆಗೆ ಕಾರಣಗಳು:
ವಲ್ವೊಡಿನಿಯಾ ವಿವಿಧ ಕಾರಣಗಳಿಂದ ಉಂಟಾಗಬಹುದು. ಹೆರಿಗೆ, ಶಸ್ತ್ರಚಿಕಿತ್ಸೆ, ಕೀಮೋಥೆರಪಿ ಚಿಕಿತ್ಸೆ, ಅಥವಾ ಯೋನಿ ಸೋಂಕುಗಳಿಂದ ಯೋನಿ ಪ್ರದೇಶಕ್ಕೆ ಗಾಯವಾದರೆ ಈ ಸಮಸ್ಯೆ ಕಾಡುತ್ತದೆ. ಹಾಗೂ ಕೆಲವು ಮಹಿಳೆಯರಿಗೆ ಅನುವಂಶಿಕವಾಗಿಯೂ ಕೂಡ ಈ ಸಮಸ್ಯೆ ಕಾಡಬಹುದು. ಋತುಚಕ್ರ, ಗರ್ಭಧಾರಣೆ ಅಥವಾ ಋತುಬಂಧದ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಗಳಿಂದ ಈ ಸಮಸ್ಯೆ ಉಂಟಾಗುತ್ತದೆ.
ವಲ್ವೊಡಿನಿಯಾ ಚಿಕಿತ್ಸಾ ವಿಧಾನ:
ಔಷಧಿಗಳಿಂದ ಈ ಸಮಸ್ಯೆಯನ್ನು ನಿವಾರಿಸಬಹುದು. ಹಾಗೇ ಅದರ ಜೊತೆ ಪೆಲ್ವಿಕ್ ಫ್ಲೋರ್ ವ್ಯಾಯಾಮಗಳು ಮತ್ತು ಒತ್ತಡದ ಸ್ನಾಯುಗಳನ್ನು ಸಡಿಲಗೊಳಿಸುವಂತಹ ಮಸಾಜ್ಗಳನ್ನು ಮಾಡುವುದರಿಂದ ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಅಷ್ಟೇ ಅಲ್ಲದೇ ಕಿರಿಕಿರಿಗಳನ್ನು ತಪ್ಪಿಸುವುದು, ಲೈಂಗಿಕತೆಯ ಸಮಯದಲ್ಲಿ ಲೂಬ್ರಿಕೆಂಟ್ಗಳನ್ನು ಬಳಸುವುದು ತಪ್ಪಿಸಿ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ ಮತ್ತು ಒತ್ತಡವನ್ನು ಕಡಿಮೆಮಾಡಿಕೊಳ್ಳುವುದರಿಂದ ಈ ಸಮಸ್ಯೆಗೆ ಪರಿಹಾರವನ್ನು ಪಡೆಯಬಹುದು.
ಹಾಗಾಗಿ ವಲ್ವೊಡಿನಿಯಯಾವನ್ನು ಮಹಿಳೆಯರು ನಿರ್ಲಕ್ಷ್ಯ ಮಾಡಬೇಡಿ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವೈದ್ಯರ ಸಲಹೆ ಪಡೆಯಿರಿ. ಈ ಸಮಸ್ಯೆಗೆ ಸರಿಯಾದ ಚಿಕಿತ್ಸೆ ಪಡೆದು ಯೋನಿ ನೋವಿನಿಂದ ಮುಕ್ತಿ ಹೊಂದಿರಿ.